Home » ಭಾರತದಲ್ಲೇ ಹಿಂದೂ ನಾಯಕರ ಹತ್ಯೆ ಹಾಗೂ ರಸ್ತೆ ಸ್ಪೋಟಕ್ಕೆ ಸಂಚು
 

ಭಾರತದಲ್ಲೇ ಹಿಂದೂ ನಾಯಕರ ಹತ್ಯೆ ಹಾಗೂ ರಸ್ತೆ ಸ್ಪೋಟಕ್ಕೆ ಸಂಚು

by Kundapur Xpress
Spread the love

ಕೋಲ್ಕತಾ : ಒಂದೆಡೆ ಬಾಂಗ್ಲಾದೇಶದಲ್ಲಿ ದೇಗುಲಗಳ ಮೇಲೆ, ಹಿಂದೂಗಳ ಮೇಲೆ ಅಲ್ಲಿನ ಮತಾಂಧರು ದಾಳಿ ನಡೆಸುತ್ತಿರುವ ಹೊತ್ತಿನಲ್ಲೇ ಇನ್ನೊಂದೆಡೆ ಬಾಂಗ್ಲಾ ದೇಶದ ನಿಷೇಧಿತ ಉಗ್ರ ಸಂಘಟನೆಯೊಂದು ಭಾರತದೊಳಗೆ ನುಗ್ಗಿ ಹಿಂದೂ ನಾಯಕರ ಹತ್ಯೆ ಮತ್ತು ರಸ್ತೆ ಕಾರಿಡಾರ್ ಸ್ಪೋಟದ ಮೂಲಕ ಆರ್ಥಿಕ ವಿನಾಶಕ್ಕೆ ಸಂಚು ರೂಪಿಸಿದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ

ಕಳೆದ ಕೆಲ ದಿನಗಳ ಅವಧಿಯಲ್ಲಿ ಪಶ್ಚಿಮ ಬಂಗಾಳ, ಕೇರಳ ಮತ್ತು ಅಸ್ಸಾಂನಲ್ಲಿ ಬಾಂಗ್ಲಾ ದೇಶ ಮೂಲದ ಅನ್ಸರ್ ಅಲ್ ಇಸ್ಲಾಂ ಸಂಘಟನೆಗೆ ಸೇರಿದ 8 ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ, ಈಶಾನ್ಯ ರಾಜ್ಯಗಳಲ್ಲಿನ ಪ್ರಮುಖ ಹಿಂದೂ ನಾಯಕರ ಹತ್ಯೆಯ ಉದ್ದೇಶವನ್ನು ಹೊಂದಿದ್ದು ಬೆಳಕಿಗೆ ಬಂದಿದೆ.

ಇದರ ಜೊತೆಗೆ ಭಾರತದ ಜತೆ ಈಶಾನ್ಯ ರಾಜ್ಯಗಳ ನಂಟು ಬೆಸೆಯುವ ಚಿಕನ್ ನೆಕ್ ಎಂದು ಕರೆಯಲಾಗುವ ಸಿಲಿಗುರಿ ಕಾರಿಡಾರ್ ರಸ್ತೆ ಸ್ಪೋಟಗೊಳಿಸುವ ಮೂಲಕ ಇಡೀ ಪ್ರದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ‘ಇದು ಈಶಾನ್ಯ ರಾಜ್ಯಗಳಿಗೆ ಭಾರತವನ್ನು ಬೆಸೆಯುವ ಏಕೈಕ ರಸ್ತೆ ಮಾರ್ಗವಾಗಿದೆ.

 

Related Articles

error: Content is protected !!