ಮುಂಬೈ : ಮುಂಬೈನ ವ್ಯಕ್ತಿಯೊಬ್ಬ ಕೇವಲ ಭಿಕ್ಷೆ ಬೇಡುವ ಮೂಲಕವೇ 7.5 ಕೋಟಿ ರೂ. ನಗದು ಗಳಿಸಿದ್ದಾನೆ. ಅಲ್ಲದೆ ಬರೋಬ್ಬರಿ 1.5 ಕೋಟಿ ರೂ. ಮೌಲ್ಯದ ಎರಡು ಫ್ಲ್ಯಾಟ್ ಹೊಂದಿದ್ದಾನೆ ಎಂಬ ವರದಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈಗ ಈತನನ್ನು ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಎಂದು ಹೇಳಲಾಗುತ್ತಿದೆ.
ಭರತ್ ಜೈನ್ ಒಂದು ಸ್ಟೇಷನರಿ ಅಂಗಡಿ ಹೊಂದಿದ್ದಾನೆ. ಅದಕ್ಕಿಂತಲೂ ಮುಖ್ಯವಾಗಿ ಆತನ ಕುಟುಂಬ ಭಿಕ್ಷೆ ಬೇಡುವುದನ್ನು ಒಪ್ಪುವುದಿಲ್ಲ ಆದರೆ ಜೈನ್ ಮಾತ್ರ ಅದನ್ನೇ ಮುಂದುವರಿಸಲು ನಿರ್ಧರಿಸಿದ್ದಾನೆ. ಕಳೆದ 40 ವರ್ಷಗಳಿಂದ ವಿರಾಮವಿಲ್ಲದೆ ದಿನಕ್ಕೆ 12 ಗಂಟೆ ಕಾಲ ಭಿಕ್ಷೆ ಬೇಡುವ ಆತ ಸುಮಾರು 2,500 ರೂ. ಗಳಿಸುತ್ತಾನೆ. ಅವನಿಗೆ ಅದೇ ಪ್ರಾಥಮಿಕ ಆದಾಯದ ಮೂಲವಾಗಿದೆ. ಭಿಕ್ಷೆಯಿಂದ ಆತ ತಿಂಗಳಿಗೆ ಸುಮಾರು 75,000 ರೂ. ಗಳಿಸುತ್ತಿದ್ದಾನೆ.
ತಾನು ಭಿಕ್ಷೆ ಬೇಡುವುದನ್ನು ಆನಂದಿಸುತ್ತೇನೆ ಮತ್ತು ಅದನ್ನು ಬಿಡಲು ಯಾವತ್ತೂ ಬಯಸುವುದಿಲ್ಲ ಎನ್ನುವ ಭರತ್ ಜೈನ್, ತನಗೇನೂ ದುರಾಸೆಯಿಲ್ಲ ಸಿಕ್ಕಿದ ಹಣದಲ್ಲಿ ಒಂದು ಭಾಗವನ್ನು ದೇವಾಲಯ ಗಳಿಗೆ ದಾನ ಮಾಡುವುದಾಗಿ ಹೇಳುತ್ತಾನೆ.
(0)
5, 95,500 (95,500)