106
ರಾಂಚಿ : ಪಟನಾದಿಂದ ಕೋಲ್ಕತಾಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಜಾರ್ಖಂಡ್ ರಾಜಧಾನಿ ರಾಂಚಿ ಸಮೀಪ ರಣಹದ್ದು ಡಿಕ್ಕಿ ಹೊಡೆದಿದೆ.
ಪರಿಣಾಮ ವಿಮಾನವನ್ನು ರಾಂಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾ ಗಿದೆ. ಅದೃಷ್ಟವಶಾತ್ ಅನಾಹುತ ಸಂಭವಿಸಿಲ್ಲ. ವಿಮಾನಕ್ಕೆ ಕೊಂಚ ಹಾನಿಯಾಗಿದೆ. ಮಧ್ಯಾಹ್ನ 1.00 ಗಂಟೆ ಸುಮಾರಿಗೆ ಪಟನಾದಿಂದ ಕೋಲ್ಕತಾಗೆ ಹೊರಟ ವಿಮಾನಕ್ಕೆ 4000 ಅಡಿ ಎತ್ತರದಲ್ಲಿ ರಣಹದ್ದು ಡಿಕ್ಕಿ ಹೊಡೆದಿದೆ. ವಿಮಾನದಲ್ಲಿ 175 ಪ್ರಯಾಣಿಕರಿದ್ದರು.

