Home » ಪಾಕ್‌ನ 6 ಡ್ರೋನ್ ಹೊಡೆದ ಬಿಎಸ್‌ಎಫ್
 

ಪಾಕ್‌ನ 6 ಡ್ರೋನ್ ಹೊಡೆದ ಬಿಎಸ್‌ಎಫ್

by Kundapur Xpress
Spread the love

ಅಮೃತಸರ : ಪಂಜಾಬ್ ಅಮೃತಸರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ ಪಾಕಿಸ್ತಾನದ ಆರು ಡ್ರೋನ್ ಗಳನ್ನು ಗಡಿ ಭದ್ರತಾ ಪೊಲೀಸ್ (ಬಿಎಸ್‌ಎಫ್) ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಒಂದು ಕೆಜಿ ಹೆರಾಯಿನ್ ಮತ್ತು ಮೂರು ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಮೂರು ಪಿಸ್ತೂಲುಗಳನ್ನು ಹೊಂದಿರುವ ನಾಲ್ಕು ಪ್ಯಾಕೆಟ್‌ಗಳು, ಮೂರು ಮ್ಯಾಗಜೀನ್‌ಗಳು ಮತ್ತು 1.070 ಕೆಜಿ ತೂಕದ ಹೆರಾಯಿನ್ ಪ್ಯಾಕೆಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಮುಂಜಾನೆ ಪ್ರತ್ಯೇಕ ಘಟನೆಗಳಲ್ಲಿ, ಅಟ್ಟಾರಿ ಗ್ರಾಮದ ಬಳಿ ಬಿಎಸ್‌ಎಫ್ ಪಡೆಗಳು ಮತ್ತೊಂದು ಡ್ರೋನ್ ಅನ್ನು ತಡೆದು ಎರಡು ಮ್ಯಾಗಜಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ತರ್ನ್ ತರನ್ ಜಿಲ್ಲೆಯ ದಾಲ್ ಗ್ರಾಮದ ಬಳಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಬಿಎಸ್‌ಎಫ್ ಪಡೆಗಳು ಭತ್ತದ ಗದ್ದೆಯಿಂದ ಪಿಸ್ತೂಲಿನ ಬಿಡಿ ಭಾಗಗಳು ಮತ್ತು ಮ್ಯಾಗಜೀನ್ ಅನ್ನು ವಶಪಡಿಸಿಕೊಂಡಿವೆ

 

Related Articles

error: Content is protected !!