62
ಅಮೃತಸರ : 21 ದಿನಗಳ ಬಂಧನದ ಬಳಿಕ ಭಾರತದ ಬಿಎಸ್ಎಫ್ ಯೋಧ ಪೂರ್ಣಂ ಕುಮಾರ್ ಶಾ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿದೆ. ಪಂಜಾಬ್‌ನಲ್ಲಿ ಉಭಯ ರಾಷ್ಟ್ರಗಳ ನಡುವಣ ಅಂತಾರಾಷ್ಟ್ರೀಯ ಗಡಿಯಿಂದ ಪೂರ್ಣಂ ಕುಮಾರ್‌ರನ್ನು ಪಾಕ್ ಸೈನಿಕರು ಬಂಧಿಸಿ ಕರೆದೊಯ್ದಿದ್ದರು. ಏ.22ರ ಪಹಲ್ಲಾಮ್ ಭಯೋತ್ಪಾದಕ ದಾಳಿ ಮರುದಿನವೇ ಈ ಘಟನೆ ನಡೆದಿತ್ತು.
ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ಅಮೃತಸರ ಜಿಲ್ಲೆಯ ಅಟ್ಟಾರಿಯಲ್ಲಿನ ಜಂಟಿ ಚೆಕ್‌ಪೋಸ್ ನಲ್ಲಿ ಭಾರತೀಯ ಯೋಧನನ್ನು ಪಾಕ್ ಸೈನಿಕರು ಬಿಎಸ್‌ಎಫ್‌ಗೆ ಹಸ್ತಾಂತರಿಸಿದರೆಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ. ಫಿರೋಜ್ ಪುರ ವಲಯದಲ್ಲಿ ಕಾರ್ಯಾಚರಣೆ ಕರ್ತವ್ಯದಲ್ಲಿದ್ದ ಯೋಧ ಪೂರ್ಣ೦ ಕುಮಾರ್ ಏ.23ರಂದು ರಾತ್ರಿ 11.50ರ ಸುಮಾರಿಗೆ ಸ್ವಯಂ ಅರಿವಿಲ್ಲದೆ ಅಕಸ್ಥಾತ್ ಪಾಕ್ ಪ್ರದೇಶ ಪ್ರವೇಶಿಸಿದ್ದರು ಮತ್ತು ಪಾಕ್ ಸೈನಿಕರು ತಕ್ಷಣ ಇವರನ್ನು ಸೆರೆ ಹಿಡಿದು ಒಯ್ದಿದ್ದರು.

