ಹೊಸದಿಲ್ಲಿ: ಉಗ್ರ ರಾಷ್ಟ್ರ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿ ಮತ್ತು ಅಝರ್ ಬೈಜಾನ್ ದೇಶಗಳಿಗೆ ಈಗ ಭಾರತದ ಕಡೆಯಿಂದ ಬಾಯ್ಕಾಟ್ ಬಿಸಿ ಜೋರಾಗಿದೆ.
ಭಾರತ-ಪಾಕಿಸ್ತಾನ ಸಂಘರ್ಷ ಶುರುವಾದ ಮೇಲೆ ಈ ಎರಡೂ ರಾಷ್ಟ್ರಗಳು ಬಹಿರಂಗವಾಗಿಯೇ ಪಾಕ್‌ಗೆ ಬೆಂಬಲ ನೀಡಿದ್ದು, ಟರ್ಕಿ 350 ಡೋನ್ ಮತ್ತು ಸಿಬ್ಬಂದಿಯನ್ನೂ ಕಳುಹಿಸಿತ್ತು. ಇದು ಭಾರತೀಯರ ಆಕ್ರೋಶಕ್ಕೂ ಕಾರಣವಾಗಿತ್ತು.
ಈ ಎರಡೂ ದೇಶಗಳು ಭಾರತೀಯ ಪ್ರವಾಸಿಗರ ಪಾಲಿಗೆ ನೆಚ್ಚಿನ ತಾಣಗಳಾಗಿದ್ದು, ವಾರ್ಷಿಕ ಲಕ್ಷ ಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುತ್ತಿದ್ದರು. ಆದರೆ, ಭಾರತ-ಪಾಕಿಸ್ತಾನ ಸಂಘರ್ಷ ಶುರುವಾದ ಮೇಲೆ ಇಲ್ಲಿಗೆ ತೆರಳುವವರ ಪ್ರಮಾಣ ಭಾರೀ ಕಡಿಮೆಯಾಗಿದೆ
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್ ಟರ್ಕಿ ಮತ್ತು ಅಝರ್ ಬೈಜಾನ್ ಟ್ರೆಂಡಿಂಗ್‌ನಲ್ಲಿದ್ದು ವಿಮಾನ ಬುಕ್ಕಿಂಗ್ ರದ್ದು ಮಾಡುತ್ತಿರುವ ಬೆಳವಣಿಗೆಗಳು ಹೆಚ್ಚುತ್ತಿವೆ. ಅಂದರೆ, ಬುಕ್ಕಿಂಗ್ ಪ್ರಮಾಣ ಶೇ. `60ರಷ್ಟು ಕುಸಿತ ಕಂಡಿದ್ದರೆ, ರದ್ದತಿ ಪ್ರಮಾಣ ಶೇ.250ರಷ್ಟು ಹೆಚ್ಚಾಗಿದೆ ಎಂದು ಆನ್‌ಲೈನ್ ವೇದಿಕೆಗಳು ಮಾಹಿತಿ ನೀಡಿವೆ.

