Home » ಅಕ್ರಮ ಕಟ್ಟಡ ಪತನ : ಬರ್ತಡೇ ಖುಷಿಯಲ್ಲಿದ್ದ ಮಗು ಸೇರಿ 17 ಸಾವು
 

ಅಕ್ರಮ ಕಟ್ಟಡ ಪತನ : ಬರ್ತಡೇ ಖುಷಿಯಲ್ಲಿದ್ದ ಮಗು ಸೇರಿ 17 ಸಾವು

by Kundapur Xpress
Spread the love

ಪಾಲ್ಟರ್ : ಮಹಾರಾಷ್ಟ್ರದ ವಿರಾರ್‌ನಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ 4 ಅಂತಸ್ತಿನ ಕಟ್ಟಡ ಕುಸಿದು, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ 1 ವರ್ಷಡ ಮಗು ಸೇರಿ 17 ಮಂದಿ ಮೃತಪಟ್ಟಿದ್ದಾರೆ.

ಇಲ್ಲಿನ ವಿಜಯ್ ನಗರದಲ್ಲಿ 50 ಫ್ಲ್ಯಾಟ್‌ ಗಳಿರುವ ರಮಾಬಾಯಿ ಅಪಾರ್ಟ್‌ಮೆಂಟ್‌ನಲ್ಲಿ ದುರಂತ ನಡೆದಿದೆ. ನಾಲ್ಕನೇ ಮಹಡಿಯಲ್ಲಿ ಒಂದು ವರ್ಷದ ಮಗುವಿನ ಹುಟ್ಟುಹಬ್ಬ ನಡೆಯುತ್ತಿತ್ತು. ಆಗ ಇದ್ದಕ್ಕಿದ್ದಂತೆ 12 ಫ್ಲ್ಯಾಟ್‌ಗಳು ಕುಸಿದಿದ್ದು ನಿವಾಸಿಗಳು, ಅತಿಥಿಗಳು ಅವಶೇಷಗಳಡಿ ಸಿಲುಕಿಕೊಂಡರು.

ವಿಚಾರ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, 20 ಗಂಟೆಗೂ ಹೆಚ್ಚಿನ ಕಾಲದಿಂದ ಕಾರ್ಯಚರಣೆ ನಡೆಯುತ್ತಿದೆ. ಈ ಕಟ್ಟಡ ಅನಧಿಕೃತವಾಗಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದ್ದು, ಪೊಲೀಸರು ಬಿಲ್ಡರ್ ನಿತಲ್ ಗೋಪಿನಾತ್ ಸಾನೆ ಬಂಧಿಸಿ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

 

Related Articles

error: Content is protected !!