Home » ಸೇನಾ ವಾಹನ ಕಂದಕಕ್ಕೆ : 5 ಯೋಧರು ವೀರಗತಿ
 

ಸೇನಾ ವಾಹನ ಕಂದಕಕ್ಕೆ : 5 ಯೋಧರು ವೀರಗತಿ

by Kundapur Xpress
Spread the love

ಶ್ರೀನಗರ : ಪೊಂಚ್ ಜಿಲ್ಲೆಯ ಬಲ್ಲೋಯ್ ಪ್ರದೇಶದಲ್ಲಿ ಮಂಗಳವಾರ ಸೇನಾ ವಾಹನ 350 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 5 ಯೋಧರು ವೀರಗತಿ ಹೊಂದಿದ್ದು ಇತರ 11 ಮಂದಿ ಗಾಯಗೊಂಡಿದ್ದಾರೆ.

ಮದ್ರಾಸ್ ಲೈಟ್ ಇನ್ವೆಂಟ್ರಿ (11 ಎಂಎಲ್‌ಐ) ಗೆ ಸೇರಿದ ವಾಹನವು ನೀಲಂ ಪ್ರಧಾನ ಕಚೇರಿಯಿಂದ ಬಾಲೋಯ್ ಘೋರಾ ಪೋಸ್ಟ್‌ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ವಾಹನವು ಕಮರಿಗೆ ಬಿದ್ದ ನಂತರ ತ್ವರಿತ ಪ್ರತಿಕ್ರಿಯೆ ತಂಡವು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು

ಅಪಘಾತ ಸಂಭವಿಸಿದಾಗ ಒಟ್ಟು 18 ಸೈನಿಕರು ವಾಹನದಲ್ಲಿದ್ದರು. ಸದ್ಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಟ್ ನೈಟ್ ಕಾರ್ಪ್ಸ್ ತನ್ನ ಎಕ್ಸ್ ಖಾತೆಯ ಮೂಲಕ ಮೃತರ ಸಂಖ್ಯೆಯನ್ನು ಖಚಿತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಗೊಂಡಿರುವ ಸೇನಾ ಸಿಬ್ಬಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಸೇನಾ ವಾಹನವು ಘೋರಾ ಪೋಸ್ಟ್ ಬಳಿಯ ಕಮರಿಗೆ ಬಿದ್ದಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.

 

Related Articles

error: Content is protected !!