ಹೊಸದಿಲ್ಲಿ: ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಸುಮಾರು ಎರಡು ತಿಂಗಳ ನಂತರ, ಪೌರತ್ವ ಕಾಯ್ದೆ (ಸಿಎಎ) ಅನ್ವಯ ಮೊದಲ ಸುತ್ತಿನ ಪೌರತ್ವ ಪ್ರಮಾಣ ಪತ್ರಗಳನ್ನು 14 ಮಂದಿಗೆ ಬುಧವಾರ ನೀಡಲಾಗಿದೆಸಿಎಎ ವ್ಯಾಪ್ತಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾ ತರು ಭಾರತದಲ್ಲಿ ಪೌರತ್ವ ಪಡೆಯಬಹುದು. 2019ರ ಡಿಸೆಂಬರ್‌ನಲ್ಲಿ ಸಂಸತ್ತು, ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಅಂಗೀಕರಿಸಿದ ನಾಲ್ಕು ವರ್ಷಗಳ ನಂತರ ಕೇಂದ್ರ ಗೃಹ ಸಚಿವಾಲಯ ಮಾರ್ಚ್ 11 ರಂದು ನಿಯಮಗಳ ಅಧಿಸೂಚನೆ ಹೊರಡಿಸಿತ್ತು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ 14 ಜನರು, ಪ್ರಕ್ರಿಯೆಗಳನ್ನು ಪೂರೈಸಿದ ನಂತರ ತಮ್ಮ ಅರ್ಜಿಗಳನ್ನು ಪೌರತ್ವ ಪ್ರಮಾಣಪತ್ರಗಳನ್ನು ಬುಧವಾರ ಪಡೆದರು