ಕೆನಡ : ನಾಯಕತ್ವ ಬದಲಾಗಬೇಕೆಂದು ಆಳುವ ಲಿಬರಲ್ ಪಕ್ಷದೊಳಗೆ ಅಸಮಾಧಾನ, ಆಗ್ರಹ ಹೆಚ್ಚಿದ ಕಾರಣ ಪ್ರಧಾನಿ ಹುದ್ದೆಗೆ ಜಸ್ಟಿನ್ ಟ್ರುಡೋ ರಾಜೀನಾಮೆ ನೀಡಿದ ನಂತರ ಇದೀಗ ಪ್ರಧಾನಿ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ರೇಸ್ ನಲ್ಲಿರುವವರ ಪೈಕಿ ಭಾರತ ಮೂಲದ ಸಾರಿಗೆ ಸಚಿವೆ ಅನಿತಾ ಆನಂದ್ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿದೆ.
ಪ್ರಧಾನಿ ಹುದ್ದೆಗೆ ಹೊಸ ನಾಯಕನ ಆಯ್ಕೆಗೆ ಮಾ. 24 ಅಂತಿಮ ಗಡುವು. ಅಂದರೆ 2 ತಿಂಗಳ ಸಮಯವಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ಆಕಾಂಕ್ಷಿಗಳ ಪಟ್ಟಿಯೂ ಬೆಳೆದಿದೆ. ಟ್ರುಡೋರ ಸಂಭಾವ್ಯ ಉತ್ತರಾಧಿಕಾರಿಗಳ ಪೈಕಿ ಅನಿತಾ ಆನಂದ್ ಹೆಸರು ಹೆಚ್ಚು ಪ್ರಚಲಿತದಲ್ಲಿದೆ ಎಂದು ತಿಳಿದುಬಂದಿದೆ