ಗೋಕರ್ಣ : ಕನಡಾದಲ್ಲಿ ಲಿಬರಲ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಿಂದ ಜಸ್ಟಿನ್ ಟ್ರುಡೋ ಕೆನಾಡದ ಪ್ರಧಾನಿ ಪಟ್ಟಕ್ಕೆ ರಾಜೀನಾಮೆ ಘೋಷಿಸಿದ ಬಳಿಕ ಮುಂದಿನ ಪ್ರಧಾನಿ ಹುದ್ದೆಗೆ ಕರ್ನಾಟಕದ ತುಮಕೂರಿನ ಶಿರಾದ ದ್ವಾರಲು ಮೂಲದ ಚಂದ್ರ ಆರ್ಯರವರು ಮುಂಚೂಣಿಯಲ್ಲಿದ್ದಾರೆ.
ಇವರ ಪತ್ನಿ ಸಂಗೀತಾ ಗಾಯತ್ರಿ ಪುಣ್ಯಕ್ಷೇತ್ರ ಗೋಕರ್ಣದವರಾಗಿದ್ದು ಇಲ್ಲಿನ ಅಳಿಯ ಕೆನಡಾ ಪ್ರಧಾನಿಯಾಗುವ ಸಾಧ್ಯತೆ ವಿಶೇಷವಾಗಿದೆ. ಇಲ್ಲಿನ ವೈದಿಕ ಮನೆತನವಾದ ಗಾಯತ್ರಿ ಕುಟುಂಬದವರು ಇವರ ತಂದೆ ದಿವಂಗತ ಗೋಪಾಲ ಗಾಯತ್ರಿ ದಾಂಡೇಲಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರ ಪತ್ನಿ ರಮಾ ಗಾಯತ್ರಿ ಇವರಿಗೆ ಇಬ್ಬರು ಪುತ್ರಿಯರಾಗಿದ್ದು, ಸಂಗೀತ ಹಿರಿಯವರಾಗಿದ್ದಾರೆ. ಇವರ ಪದವಿಯವರೆಗೆ ದಾಂಡೇಲಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ಧಾರವಾಡದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ನಂತರ ಎರಡು ವರ್ಷ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದು, ಈ ವೇಳೆ ಅವರಿಗೆ ತುಮಕೂರು ಮೂಲದ ಚಂದ್ರ ಆರ್ಯರವರೆಗೆ ವಿವಾಹವಾಗಿದ್ದಾರೆ.
ಬೆಂಗಳೂರಿನಲ್ಲಿ ಕೆ.ಎಸ್.ಎಫ್. ನೌಕರರಾಗಿರುವ ಚಂದ್ರ ಆರ್ಯವರು ಕೆಲವು ವರ್ಷಗಳ ನಂತರ ಸ್ವಂತ ಉದ್ಯೋಗ ಪ್ರಾರಂಭಿಸಿದ್ದರು. ಇದಾದ ನಂತರ 2005ಕ್ಕೆ ಕತಾರಾದಲ್ಲಿ ಉದ್ಯೋಗಕ್ಕೆ ತೆರಳಿದ್ದು ಚಂದ್ರ ಆರ್ಯ ಕೆಲ ವರ್ಷ ಅಲ್ಲಿ ಕಾರ್ಯನಿರ್ವಹಿಸಿ, ಉನ್ನತ ಉದ್ಯೋಗಕ್ಕೆ ಕೆನಡಾಕ್ಕೆ ತೆರಳಿದ್ದರು. ಪ್ರಸ್ತುತ ಸಂಗೀತಾ ಗಾಯತ್ರಿಯವರು ಅಲ್ಲಿಯೂ ಶಿಕ್ಷಕ ವೃತ್ತಿ ಮಾಡುತ್ತಿದ್ದಾರೆ