ಒಟ್ಟಾವ : ಭಾರತ ವಿರೋಧಿ ನಿಲುವುಗಳಿಂದ ಹಾಗೂ ಖಲಿಸ್ತಾನಿ ಉಗ್ರರ ಪರ ನಿಲುವುಗಳಿಂದ ಕುಖ್ಯಾತಿ ಹೊಂದಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಸೋಮವಾರ ಹಠಾತ್ ರಾಜೀನಾಮೆ ಘೋಷಿಸಿದ್ದಾರೆ. ಲಿಬರಲ್ ಪಕ್ಷದ ಅಧ್ಯಕ್ಷ ಹುದ್ದೆ ಹಾಗೂ ಪ್ರಧಾನಿ ಹುದ್ದೆಗೆ ತಾವು ರಾಜೀನಾಮೆ ನೀಡುತ್ತಿರುವುದಾಗಿ ಪ್ರಕಟಿಸಿರುವ ಅವರು, ಉತ್ತರಾಧಿಕಾರಿ ಆಯ್ಕೆ ಆದ ಬಳಿಕ ಅಧಿಕೃತವಾಗಿ ತ್ಯಾಗಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದೊಳಗೆ ಆಂತರಿಕ ಕದನಗಳು ಇದ್ದವು. ಅಲ್ಲದೆ ಮುಂದಿನ ಚುನಾವಣೆಯಲ್ಲಿ ತಾವು ಮತ್ತೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವ ಅವಕಾಶವಿಲ್ಲ ಎಂದು ಅರಿವಾಯಿತು ಇದು ಪಕ್ಷದ ಮುಖ್ಯಸ್ಥ ಮತ್ತು ಕೆನಡಾದ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣವಾಯಿತು’ ಎಂದರು.
ಇದಲ್ಲದೆ, ತಮ್ಮ ಉತ್ತರಾಧಿಕಾರಿಯ ಆಯ್ಕೆಗೆ ಬೇಗ ಅನ್ವೇಷಣೆ ನಡೆಸುವಂತೆ ಅವರು ಲಿಬರಲ್ ಪಕ್ಷಕ್ಕೆ ಮನವಿ ಮಾಡಿದರು. ಅಲ್ಲದೆ, ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥ ಪಿಯರೆ ಪೊಯ್ಲಿವರ್ಸ್ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂಬ ವರದಿಗಳಿಗೆ ಕಿಡಿಕಾರಿದ ಅವರು, ‘ಪೊಯ್ಲಿವರ್ಸ್ ಅಧ್ಯಕ್ಷ ನಾಗಲು ಅನರ್ಹ’ ಎಂದು ಕಿಡಿಕಾರಿದರು