76
ಗೋಂಡಾ (ಉತ್ತರ ಪ್ರದೇಶ) : ಗೋಂಡಾ ಜಿಲ್ಲೆಯ ಬೆಲ್ಲ ಬಹುಟಾ ಬಳಿಯ ಸರಯೂ ಕಾಲುವೆಗೆ ಎಕ್ಸ್ ಯು ವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಒಂಬತ್ತು ಮಂದಿ ಸೇರಿದಂತೆ 11 ಮಂದಿ ಸಾವಿಗೀಡಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ.
ಸಂತಸ್ತರು ಸಿಹಗಾಂವ್ ಗ್ರಾಮದಿಂದ ಖರಗುಪುರದ ಪೃಥ್ವಿನಾಥ ದೇವಾಲಯಕ್ಕೆ ಪ್ರಯಾಣಿಸುತ್ತಿದ್ದರು. ಕಾರು ಚಾಲಕ ಸೇರಿದಂತೆ ವಾಹನದಲ್ಲಿ 15 ಜನರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ಸಿಹಗಾಂವ್ ನಿವಾಸಿ ಪ್ರಹ್ಲಾದ್ ಪತ್ನಿ ಬೀನಾ, ಪುತ್ರಿಯರಾದ ಕಾಜಲ್ ಮತ್ತು ಮೆಹಕ್, ಸಂಬಂಧಿಕರು ಮತ್ತು ನೆರೆಹೊರೆಯವರು ಸೇರಿದ್ದಾರೆ. ಪ್ರಹ್ಲಾದ್ ಪುತ್ರ ಸತ್ಯಂ, ಮಗಳು ಪಿಂಕಿ, ನೆರೆಹೊರೆಯ ರಾಮ್ ಲಲನ್ ವರ್ಮಾ ಮತ್ತು ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

