96
ಕಣ್ಣೂರು : 2 ರೂ. ವೈದ್ಯ ಎಂದೇ ಕೇರಳದಲ್ಲಿ ಹೆಸರುವಾಸಿಯಾಗಿದ್ದ ಡಾ.ಎ.ಕೆ. ರೈರು ಗೋಪಾಲ್ (81) ವಯೋಸಹಜ ಕಾಯಿಲೆಯಿಂದ ಭಾನುವಾರ ಮೃತಪಟ್ಟಿದ್ದಾರೆ.
ವೈದ್ಯ ಲೋಕದಲ್ಲಿ ಅವಿರತ ಸೇವೆಗಾಗಿ ಎಲ್ಲೆಡೆ ಪ್ರಸಿದ್ಧರಾ ಗಿದ್ದರು. 5 ದಶಕಗಳ ಕಾಲ ಕಣ್ಣೂರಿನಲ್ಲಿ ಪುಟ್ಟ ಕ್ಲಿನಿಕ್ ನಡೆಸಿಕೊಂಡು ಬಂದಿದ್ದರು. ಹಲವು ವರ್ಷಗಳ ಕಾಲ ರೋಗಿಗಳಿಂದ ಕೇವಲ 2 ರೂ. ಮಾತ್ರ ಪಡೆಯುತ್ತಿದ್ದ ಅವರು ಬಡ ರೋಗಿಗಳ ಪಾಲಿಗೆ ಭರವಸೆಯ ಕಿರಣವಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ರೋಗಿಗಳಿಂದ ಪಡೆಯುತ್ತಿದ್ದ ಶುಲ್ಕ 40-50 ರೂ. ಆಗಿತ್ತು ಅಷ್ಟೇ.

