96
ನವದೆಹಲಿ : ಡಿಜಿಟಲ್ ಅರೆಸ್ಟ್ ಹಗರಣಗಳಲ್ಲಿ ಬಳಸಲಾದ ಸಿಮ್ ಕಾರ್ಡ್‌ಗಳ ಅಕ್ರಮ ಮಾರಾಟಗಾರರ ಪತ್ತೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಶನಿವಾರ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ದಾಳಿ ನಡೆಸಿ, ಐವರನ್ನು ಬಂಧಿಸಿದ್ದಾರೆ. ಆಪರೇಷನ್ ಚಕ್ರ-5 ಅಡಿಯಲ್ಲಿ ಕರ್ನಾಟಕ, ತೆಲಂಗಾಣ, ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಉ. ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಒಟ್ಟು 42 ಸ್ಥಳಗಳಲ್ಲಿ ದಾಳಿ ನಡೆಸಿ, 5 ಜನರನ್ನು ಬಂಧಿಸಲಾಗಿದೆ. ಇವರು ಸೈಬರ್ ಅಪರಾಧಿಗಳು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರ ಕಾರ್ಯನಿರ್ವಾಹಕರ ಜತೆ ಸೇರಿ ಡಿಜಿಟಲ್ ಬಂಧನ ಹಗರಣಗಳು, ಮೋಸದ ಜಾಹೀರಾ ತುಗಳು, ಹೂಡಿಕೆ ವಂಚನೆಗಳು ಮತ್ತು ಯುಪಿಐ ವಂಚನೆಗಳಂತಹ ಅಪರಾಧಗಳಲ್ಲಿ ಬಳಸುವ ಸಿಮ್ ಕಾರ್ಡ್ ನೀಡುತ್ತಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

