Home » ಸಿಬಿಎಸ್‌ಇ ಶಾಲೆಗಳಿಗೆ ಸಿಸಿಟಿವಿ ಕಡ್ಡಾಯ
 

ಸಿಬಿಎಸ್‌ಇ ಶಾಲೆಗಳಿಗೆ ಸಿಸಿಟಿವಿ ಕಡ್ಡಾಯ

ಶೌಚಾಲಯ ಹೊರತುಪಡಿಸಿ ಎಲ್ಲೆಡೆ ಸಿಸಿಟಿವಿ ಇರಬೇಕು

by Kundapur Xpress
Spread the love

ಹೊಸದಿಲ್ಲಿ :  ಶೌಚಾಲಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸ್ಥಳಗಳಲ್ಲಿ ನೈಜ-ಸಮಯದ ಆಡಿಯೊ-ವಿಶುವಲ್ ರೆಕಾಡಿರ್ಂಗ್ ಹೊಂದಿರುವ ಸಿಸಿಟಿಎ ಕ್ಯಾಮೆರಾಗಳನ್ನು ಅಳವಡಿಸುವುದನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ಕಡ್ಡಾಯ ಮಾಡಿದೆ.

ವಿದ್ಯಾರ್ಥಿಗಳ ಸುರಕ್ಷತೆಯು ಶಾಲೆಯ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ. ಜತೆಗೆ ಸಮಾಜಘಾತುಕ ವ್ಯವಸ್ಥೆಗಳಿಂದ ಸುರಕ್ಷತೆ ನೀಡುವುದು, ಮಕ್ಕಳಿಗೆ ಬೇರೆ ಯಾವುದೇ ರೀತಿಯ ಬೆದರಿಕೆ ಬರದಂತೆ ನೋಡಿಕೊಳ್ಳುವುದು ಶಾಲೆಗಳ ಹೊಣೆಯಾಗಿದೆ ಎಂದು ಹೇಳಿದೆ.

ಶಾಲೆಯ ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಲಾಬಿಗಳು, ಕಾರಿಡಾರ್‌ಗಳು, ಮೆಟ್ಟಿಲುಗಳು, ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಗ್ರಂಥಾಲಯ, ಕ್ಯಾಂಟೀನ್ ಪ್ರದೇಶ, ಸ್ಟೋರ್ ರೂಮ್, ಆಟದ ಮೈದಾನ ಸೇರಿದಂತೆ ಇತರೆ ಸಾಮಾನ್ಯ ಪ್ರದೇಶಗಳಲ್ಲಿ ಆಡಿಯೋ ಕೂಡ ರೆಕಾರ್ಡ್ ಆಗುವಂಥ ಹೈರೆಸಲ್ಯೂಶನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಿದೆ.

ಅಲ್ಲದೆ, ಈ ಸಿಸಿಟಿವಿ ಕ್ಯಾಮೆರಾಗಳು ಉತ್ತಮವಾದ ಸಂಗ್ರಹ ಸಾಧನವನ್ನೂ ಒಳಗೊಂಡಿರಬೇಕು ಎಂದು ಹೇಳಿದೆ. ಇದರ ಜತೆಗೆ ಕನಿಷ್ಠ 15 ದಿನಗಳ ದೃಶ್ಯಾವಳಿಗಳನ್ನು ಶೇಖರಿಸಿ ಇಡಬೇಕು, ಅಗತ್ಯಬಿದ್ದರೆ ಅಧಿಕಾರಿಗಳು ಇದನ್ನು ಪರಿಶೀಲಿಸಬಹುದಾಗಿದೆ ಎಂದು ತಿಳಿಸಿದೆ

 

Related Articles

error: Content is protected !!