ನವದೆಹಲಿ : ವೃತ್ತಾಕಾರದಲ್ಲಿ ಕುರ್ಚಿ ಮೇಲೆ ಕುಳಿತ ಆಟಗಾರರೊಂದಿಗೆ ಪ್ರಧಾನಿ ಮೋದಿ ವಿಶೇಷ ಮಾತುಕತೆ ನಡೆಸಿದರು. ಈ ವೇಳೆ ಆಟಗಾರರು ಅಮೆರಿಕ-ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆದ ಟಿ-20 ವಿಶ್ವಕಪ್ ಗೆಲುವಿನ ಅನುಭವಗಳನ್ನು ಹಂಚಿಕೊಂಡರು. ಬಳಿಕ ಮೋದಿ ಆಟಗಾರರು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಚಿತ್ರಗಳಿಗೂ ಪೋಸ್ ನೀಡಿದರು. ಜಸ್ ಪ್ರೀತ್ ಬುಮ್ರಾ ಅವರ 10 ತಿಂಗಳ ಪುತ್ರ ಅಂಗದ್ನನ್ನು ಮೋದಿ ಅವರೇ ಎತ್ತಿಕೊಂಡು ಪೋಸ್ ನೀಡಿದರು. ಪ್ರಧಾನಿ ಅಪ್ಪಿಕೊಂಡು ಅಭಿನಂದಿಸಿದಾಗ ಕುಲದೀಪ್ ಯಾದವ್ ಭಾವುಕರಾದರು. ವೇಗಿ ಅರ್ಷದೀಪ್ ಸಿಂಗ್ ತಂದೆ-ತಾಯಿಯೊಂದಿಗೆ ಮೋದಿ ಭೇಟಿಯಾದರು. ಆಟಗಾರರು ಸುಮಾರು 2 ಗಂಟೆ ಕಾಲ ಪ್ರಧಾನಿ ನಿವಾಸದಲ್ಲಿದ್ದರು ಮತ್ತು ಅಲ್ಲೇ ಬೆಳಗ್ಗಿನ ಉಪಹಾರ ಸೇವಿಸಿದರು