Home Uncategorizedಇಂದು ಶುಭಾಂಶು ಅಂತರಿಕ್ಷ ಪಯಣ

ಇಂದು ಶುಭಾಂಶು ಅಂತರಿಕ್ಷ ಪಯಣ

ಐ ಎಸ್‌ ಎಸ್‌ಗೆ ಮೊದಲ ಭಾರತೀಯ

by Kundapur Xpress

ವಾಷಿಂಗ್ಟನ್ : ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಆಕ್ಸಿಯಮ್-4 ಯೋಜನೆ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ( ಐ ಎಸ್‌ ಎಸ್‌ಗೆ ) ಭೇಟಿ ನೀಡಲಿರುವ ಮೊದಲ ಭಾರತೀಯರಾಗಿ ಇತಿಹಾಸ ನಿರ್ಮಿಸಲಿದ್ದಾರೆ. ಈ ಬಹು ನೀರಿಕ್ಷಿತ ಉಡಾವಣೆ ಇಂದು ಬುಧವಾರ ಸಂಜೆ 5:30ಕ್ಕೆ (ಭಾರತೀಯ ಕಾಲಮಾನ) ನಡೆಯಲಿದೆ.

ಇತರ ಬಾಹ್ಯಾಕಾಶ ಪ್ರವಾಸೋದ್ಯಮ ಕಂಪನಿಗಳಿಗಿಂತ ಭಿನ್ನವಾಗಿ, ಅಕ್ಸಿಯಮ್ ಸಂಪೂರ್ಣ ಗಗನಯಾತ್ರೆಯ ಅನುಭವ ಒದಗಿಸುತ್ತದೆ. ನಾಸಾ ಮಾನದಂಡಗಳನ್ನು ಪೂರೈಸುವ 8 ತಿಂಗಳಿಂದ ಒಂದು ವರ್ಷದ ತೀವ್ರ ತರಬೇತಿ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಇದರಲ್ಲಿ 700-1,000 ಗಂಟೆಗಳ ಸುರಕ್ಷತಾ ಪ್ರೋಟೋಕಾಲ್‌ಗಳು, ಐಎಸ್ಎಸ್ ವ್ಯವಸ್ಥೆಗಳು ಮತ್ತು ಉಡಾವಣಾ ಕಾರ್ಯಾಚರಣೆಗಳ ತಯಾರಿ ಸೇರಿದೆ.

ಈ ಯೋಜನೆ ಭಾರತ, ಪೋಲೆಂಡ್ ಮತ್ತು ಹಂಗೇರಿ ಜೊತೆಗಿನ ಸರ್ಕಾರಿ ಒಪ್ಪಂದವಾಗಿದೆ. ಸ್ವತಂತ್ರವಾಗಿ ಬಾಹ್ಯಾಕಾಶ ಯೋಜನೆಗಳನ್ನು ಅಭಿವೃದ್ಧಿಪಡಿಸುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಫಲಿತಾಂಶದ ನಿರೀಕ್ಷೆ ಮಾಡಬಹುದು. ಶತಕೋಟಿಗಳಷ್ಟು ವೆಚ್ಚವಾಗುವ ರಾಷ್ಟ್ರೀಯ ಬಾಹ್ಯಾಕಾಶ ಯೋಜನೆಗಳಿಗೆ ಹೋಲಿಸಿದರೆ, ಭಾರತ ಇದಕ್ಕಾಗಿ ಮಾಡಿರುವ ವೆಚ್ಚ 70 ಮಿಲಿಯನ್ ಡಾಲರ್, ಹೆಚ್ಚೆನಿಸುವುದಿಲ್ಲ ಎಂದು ಆಕ್ಸಿಯಮ್ ಸಂಸ್ಥೆ ಸಿಇಒ ತೇಜ್‌ಪೌಲ್ ಭಾಟಿಯಾ ತಿಳಿಸಿದ್ದಾರೆ

Related Articles