Home » ಪಾಕಿಸ್ಥಾನದ ಮೇಲೆ ಭಾರತ ಜಲಯುದ್ದ ಆರಂಭ
 

ಪಾಕಿಸ್ಥಾನದ ಮೇಲೆ ಭಾರತ ಜಲಯುದ್ದ ಆರಂಭ

by Kundapur Xpress
Spread the love

ನವದೆಹಲಿ : ಪಹಲ್ಗಾಮ್ ನರಮೇಧದ ಬಳಿಕ ಸಿಂಧು ಜಲ ಒಪ್ಪಂದವನ್ನು ತಡೆ ಹಿಡಿದು ಪಾಕಿಸ್ತಾನಕ್ಕೆ ಶಾಕ್ ನೀಡಿದ್ದ ಭಾರತ ಇದೀಗ ‘ಜಲಯುದ್ಧವನ್ನು ಅಧಿಕೃತವಾಗಿಯೇ ಆರಂಭಿಸಿದೆ.

ಸಿಂಧು ಉಪ ನದಿಯಾದ ಚಿನಾಬ್‌ ಬಗ್ಲಿಹಾರ್‌ ಅಣೆಕಟ್ಟೆಯಿಂದ ಪಾಕ್‌ಗೆ ನೀರನ್ನು ಸ್ಥಗಿತಗೊಳಿಸಿದೆ. ಇದೇ ವೇಳೆ ಇನ್ನೊಂದು ಉಪನದಿಯಾದ ಝೀಲಂಗೆ ಅಡ್ಡಲಾಗಿ ನಿರ್ಮಿಸಿರುವ ಕಿಶನ್ ಗಂಗಾ ಅಣೆಕಟ್ಟಿನಿಂದ ನೀರು ಹರಿವನ್ನು ನಿಲ್ಲಿಸಲು ಚಿಂತಿಸುತ್ತಿದೆ

ಕಳೆದ ವಾರವಷ್ಟೇ ಭಾರತವು ಸಿಂಧು ನದಿ ಒಪ್ಪಂದ ಸ್ಥಗಿತಗೊಳಿಸಿತ್ತು. ತರುವಾಯ ಪಾಕಿಸ್ತಾನಕ್ಕೆ ಕೆಲವು ನದಿಗಳ ಮೂಲಕ ಹೆಚ್ಚು ನೀರು ಬಿಟ್ಟಿತ್ತು. ಈ ಮೂಲಕ, ‘ನಮ್ಮಲ್ಲಿ ಪ್ರವಾಹ ಸೃಷ್ಟಿಗೆ ಭಾರತ ಕಾರಣವಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದರು. ಅದರ ಬೆನ್ನಲ್ಲೇ ಬಗ್ಲಿಹಾರ್‌ ಅಣೆಕಟ್ಟೆಮೂಲಕ ನೀರು ಹರಿವನ್ನು ನಿಲ್ಲಿಸಿ ಈಗ ಮತ್ತೊಂದು ರೀತಿಯ ಏಟು ನೀಡಿದೆ.

 

Related Articles

error: Content is protected !!