Home » ವೈಷ್ಟೋದೇವಿಗೆ ಹೆಲಿಕಾಪ್ಟ‌ರ್ ಸೇವೆ
 

ವೈಷ್ಟೋದೇವಿಗೆ ಹೆಲಿಕಾಪ್ಟ‌ರ್ ಸೇವೆ

by Kundapur Xpress
Spread the love

ಶ್ರೀನಗರ : ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀ ರದ ವೈಷ್ಟೋದೇವಿಗೆ ಹೆಲಿಕಾಪ್ಟರ್ ಸೇವೆ ಆರಂಭವಾಗಿದೆ.

ಆಪರೇಷನ್ ಸಿಂದೂರ ಚಾಲ್ತಿಯಿದ್ದಾಗ ಭಾರತದ ಗಡಿ ಭಾಗದ ಮೇಲೆ ಪಾಕಿಸ್ತಾನ ಸೇನೆ ಡ್ರೋನ್ ದಾಳಿ ನಡೆಸಲು ಯತ್ನಿಸಿದ್ದ ಬೆನ್ನಲ್ಲೇ ಕಳೆದ ಒಂದು ವಾರದಿಂದ ದೇವಸ್ಥಾನಕ್ಕೆ. ಹೇಲಿಕಾಪ್ಟರ್ ಸೇವೆಗಳನ್ನು ಸ್ಥಗಿತಗೊಂಡಿದ್ದವು. ಅಲ್ಲದೆ, ವಿವಿಧ ವಿಮಾನ ನಿಲ್ದಾಣಗಳನ್ನೂ ಬಂದ್ ಮಾಡಲಾಗಿತ್ತು.

ಕದನ ವಿರಾಮ ಘೋಷಣೆಯಾದ ನಿಟ್ಟಿನಲ್ಲಿ ಶ್ರೀನಗರ ಸೇರಿಸಿ 32 ವಿಮಾನ ನಿಲ್ದಾಣಗಳು ಪುನರಾರಂಭಗೊಂಡಿವೆ. ಈ ಬೆಳವಣಿಗೆಯ ಒಂದು ದಿನದ ನಂತರ ಹೇಲಿಕಾಪ್ಟರ್. ಸೇವೆಯನ್ನು ಆರಂಭಿಸಲಾಗಿದೆ. ಈ ಬಗ್ಗೆ ದೇವಸ್ಥಾನದ ಅಧಿಕಾರಿಯೊಬ್ಬರು ಮಾತನಾಡಿದ್ದು, ದೇವಸ್ಥಾನಕ್ಕೆ ಹೇಲಿಕಾಪ್ಟರ್‌ ಸೇವೆಯನ್ನು ಆರಂಭಿಸಲಾಗಿದೆ. ಗಡಿ ಭಾಗದಲ್ಲಿ ಶಾಂತಿ ಸ್ಥಾಪನೆಯಾದ ನಿಟ್ಟಿನಲ್ಲಿ ತೀರ್ಥಯಾತ್ರಿಗಳು ದೇವಸ್ಥಾನದ ಕಡೆ ದೌಡಾಯಿಸಲಾರಂಭಿಸಿದ್ದಾರೆ. ಬ್ಯಾಟರಿ ಕಾರ್ ಸೇವೆಯೂ ಆರಂಭಿಸಲಾಗಿದೆ. ಹೇಲಿಕಾಪ್ಟರ್ ಯಾತ್ರೆಯನ್ನು ಜನವರಿಯಲ್ಲಿ ಸುಮಾರು ಜನರು ಬುಕ್ ಮಾಡಿದ್ದರು ಎಂದಿದ್ದಾರೆ.

 

Related Articles

error: Content is protected !!