ಶಬರಿಮಲೆ : ಇಲ್ಲಿನ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಾಂಗಣದಲ್ಲಿ ಭಾನುವಾರ ಕಾಳಿಂಗ ಸರ್ಪ ಪತ್ತೆಯಾಗಿದೆ ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಹಿಡಿದು ರಕ್ಷಿಸಿದ್ದಾರೆ ಬೆಳಗ್ಗೆ ಸನ್ನಿಧಾನದ ಒಳಗಿನ ಭಸ್ಮಾಕುಳಂನಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತ ಅರಣ್ಯ ಸಿಬ್ಬಂದಿ ನುರಿತ ಉರಗ ರಕ್ಷಕರಿಂದ ಕಾಳಿಂಗ ಸರ್ಪವನ್ನು ರಕ್ಷಿಸಿದ್ದಾರೆ. ಬಳಿಕ ಸುರಕ್ಷಿತವಾಗಿ ದಟ್ಟಾರಣ್ಯದಲ್ಲಿ ಬಿಟ್ಟು ಬಂದಿದ್ದಾರೆ.