150
ಸಿಯೋಲ್ : ತರಬೇತಿ ವೇಳೆ ದಕ್ಷಿಣ ಕೊರಿಯಾದ ಯುದ್ಧ ವಿಮಾನವೊಂದು ಜನವಸತಿ ಪ್ರದೇಶದ ಮೇಲೆ ಆಕಸ್ಮಿಕವಾಗಿ ಎಂಟು ಬಾಂಬ್ ಗಳನ್ನು ಬೀಳಿಸಿದ್ದರಿಂದ 15 ಮಂದಿ ಗಾಯಗೊಂಡಿದ್ದಾರೆ. ಫೈಟರ್ ಜೆಟ್ ನಿಂದ ಆಕಸ್ಮಿಕವಾಗಿ ಬಿದ್ದ ಎಂಕೆ-82 ಬಾಂಬ್ ಗಳಿಂದ ಕೆಲ ನಾಗರಿಕರಿಗೆ ಗಾಯಗಳಾಗಿವೆ ಎಂದು ಸಿಯೋಲ್ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ. ಅಪಘಾತ ಸಂಭವಿಸಲು ಕಾರಣದ ತನಿಖೆ ಮಾಡಲು ಮತ್ತು ನಾಗರಿಕ ಹಾನಿಯ ಪ್ರಮಾಣ ಬಗ್ಗೆ ಪರಿಶೀಲಿಸಲು ಸಮಿತಿ ರಚಿಸಲಾಗುವುದು ಎಂದು ಕೂಡ ವಾಯುಪಡೆ ತಿಳಿಸಿದೆ

