Home » ತುರ್ತು ಪರಿಸ್ಥಿತಿ ವೇಳೆ ಮೋದಿ ಸ್ವಾಮೀಜಿ ಹಾಗೂ ಸಿಖ್‌ ವೇಶಧಾರಿ
 

ತುರ್ತು ಪರಿಸ್ಥಿತಿ ವೇಳೆ ಮೋದಿ ಸ್ವಾಮೀಜಿ ಹಾಗೂ ಸಿಖ್‌ ವೇಶಧಾರಿ

by Kundapur Xpress
Spread the love

ನವದೆಹಲಿ : ತುರ್ತು ಪರಿಸ್ಥಿತಿ ವೇಳೆ ಪ್ರಧಾನಿ ಮೋದಿ ಸಿಖ್ ಹಾಗೂ ಸ್ವಾಮೀಜಿ ವೇಷದಲ್ಲಿ ಸಂಚರಿಸಿ ಯಾರಿಗೂ ಗೊತ್ತಾಗದಂತೆ ಹೋರಾಟ ರೂಪಿಸುತ್ತಿದ್ದರು ಎಂಬ ಕುತೂಹಲದ ವಿಷಯವುಳ್ಳ ‘ದಿ ಎಮರ್ಜೆನ್ಸಿ ಡೈರೀಸ್ – ಇಯರ್ಸ್ ದೆಟ್ ಫೋರ್ಜ್ ಲೀಡರ್ ರ್ ಕೃತಿ ಬುಧವಾರ ಲೋಕಾರ್ಪಣೆಗೊಂಡಿದೆ.

ಸ್ವಾಮೀಜಿ ವೇಷದಲ್ಲಿ :

1976ರ ಸೆಪ್ಟೆಂಬರ್‌ನಲ್ಲಿ ನಾವೆಲ್ಲ ತುರ್ತುಸ್ಥಿತಿ ವಿರೋಧಿ ಹೋರಾಟದಲ್ಲಿ ಜೈಲು ಸೇರಿದ್ದೆವು. ಆಗ ಮೋದಿ ಸ್ವಾಮೀಜಿ ವೇಷದಲ್ಲಿ ಭಾವನಗರದ ಜೈಲಿಗೆ ಬಂದು ಹೋರಾಟದ ತಂತ್ರ ಹೆಣೆದರು  ಜೈಲಧಿಕಾರಿಗಳಿಗೆ ಸ್ವಾಮೀಜಿ ವೇಷದಲ್ಲಿ ಬಂದಿದ್ದು ಮೋದಿ ಎಂಬ ಸಂಶಯವೇ ಬರಲಿಲ್ಲ’ ಎಂದು ಜುನಾಗಢದ ಹಿರಿಯ ಪತ್ರಕರ್ತ ವಿಷ್ಣು ಪಾಂಡ್ಯಾ ವಿವರಿಸಿದ್ದಾರೆ.

ಸಿಖ್ ವೇಷದಲ್ಲಿ : 

ಆ ಸಂದರ್ಭದಲ್ಲಿ, ನಾಗರಿಕರ ಎದೆಯಲ್ಲಿ ಪ್ರಜಾಪ್ರಭುತ್ವದ ಜ್ವಾಲೆ ಪ್ರಜ್ವಲಿಸುವಂತೆ ಮಾಡುವಲ್ಲಿ ಸಾಹಿತ್ಯ ಮತ್ತು ಪ್ರಕಾಶನಗಳು ಬಹು ಮುಖ್ಯ ಪಾತ್ರ ವಹಿಸುತ್ತಿದ್ದವು. ಆಗ ಮೋದಿ ಸಿಖ್ ವೇಷ ಧರಿಸಿ ಗುಜರಾತ್‌ನಾದ್ಯಂತ ಪತ್ರಿಕೆ, ಪುಸ್ತಕ ತಲುಪಿಸುತ್ತಿದ್ದರು ಎಂದು ಇನ್ನೊಬ್ಬರು ಹೇಳಿದ್ದಾರೆ.

 

Related Articles

error: Content is protected !!