178
ನೋಯ್ದಾ(ಉ.ಪ್ರದೇಶ) : ನಮ್ಮ ರಾಷ್ಟ್ರದ ಹೆಸರು ಭಾರತ ವಿನಾ ಇಂಡಿಯಾ ಅಲ್ಲ. ಜಗತ್ತಿನಲ್ಲಿ ಯಾವುದೇ ರಾಷ್ಟ್ರಕ್ಕೆ ಇಂಗ್ಲಿಷ್ ನಲ್ಲೊಂದು ಮತ್ತು ಹಿಂದಿಯಲ್ಲೊಂದು ಎಂದು ಎರಡೆರಡು ಹೆಸರುಗಳಿವೆಯೇ ಎಂದು ಪ್ರಶ್ನಿಸಿರುವ ಆರೆಸ್ಸೆಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಶತಶತಮಾನಗಳಿಂದಲೂ ನಮ್ಮ ರಾಷ್ಟ್ರ ಭಾರತ ಮತ್ತು ರಾಷ್ಟ್ರವನ್ನು ಎಂದಿಗೂ ಭಾರತವೆಂದೇ ಕರೆಯೋಣ ಎಂದು ಕರೆಯಿತ್ತಿದ್ದಾರೆ.
ನೊಯ್ದಾದಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಹೊಸಬಾಳೆ, ದೇಶದ ಹೆಸರು ಭಾರತವಾಗಿರುವಾಗ ಭಾರತವೆಂದೇ ಕರೆಯಿರಿ, ಇಂಡಿಯಾ ಆಂಗ್ಲರ ಬಳುವಳಿ ಎಂದು ಆರೋಪಿಸಿದರು. ರಾಷ್ಟ್ರಪತಿ ಭವನ ಮತ್ತು ಪ್ರಧಾನಿಯವರು ಜಿ-20 ಶೃಂಗ ಸಭೆಯ ಆಮಂತ್ರಣ ಪತ್ರಗಳಲ್ಲೂ ರಿಪಬ್ಲಿಕ್ ಆಫ್ ಭಾರತ್ ಪದ ಬಳಸಿರುವುದು ಅಭಿನಂದನಾರ್ಹ ಎಂದಿರುವ ಹೊಸಬಾಳೆ, ರಾಷ್ಟ್ರವನ್ನು ಇಂಡಿಯಾ ಅಲ್ಲ, ಬದಲಾಗಿ ಭಾರತವೆಂದೇ ಕರೆಯೋಣ ಎಂದು ರಾಷ್ಟ್ರವಾಸಿಗಳಿಗೆ ಸಲಹೆ ಮಾಡಿದ್ದಾರೆ.

