68
ಮುಂಬೈ : ಖ್ಯಾತ ಗಾಯಕಿ ಆಶಾ ಭೋಂಸ್ಲೆ (91) ಅವರು ಮೃತಪಟ್ಟಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಿದಾಡುತ್ತಿದ್ದು, ಅದನ್ನು ಅವರ ಪುತ್ರ ಆನಂದ್ ಭೋಂಸ್ಥೆ ಅಲ್ಲಗಳೆದು, ‘ಇದು ಸುಳ್ಳು ಸುದ್ದಿ’ ಎಂದು ಸ್ಪಷ್ಟಪಡಿಸಿದ್ದಾರೆ.
ಶಬಾನಾ ಶೇಖ್ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ, ಆಶಾ ಅವರಿಗೆ ಹಾರ ಹಾಕಲಾದ ಫೋಟೋ ಹಂಚಿಕೊಂಡು ‘ಒಂದು ಸಂಗೀತ ಯುಗ ಕೊನೆಗೊಂಡಿದೆ’ ಎಂದು ಬರೆದಿದ್ದರು. ಇದರ ಬೆನ್ನಲ್ಲೇ ಆನಂದ್, ‘ಇದು ನಿಜವಲ್ಲ. ಯಾರೂ ನಂಬಬೇಡಿ’ ಎಂದು ಹೇಳಿದ್ದಾರೆ.

