ವಾಷಿಂಗ್ಟನ್ : ಅಮೆರಿಕ ಗುಪ್ತಚರ ಸಂಸ್ಥೆ ಎಫ್‌ಬಿಐ (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ನಿರ್ದೇಶಕರಾಗಿ ಭಾರತ ಮೂಲದ ಕಾಶ್ ಪಟೇಲ್ ಭಗವದ್ಗೀತೆ ಮೇಲೆ ಕೈ ಇರಿಸಿ ಪ್ರಮಾಣ ಸ್ವೀಕರಿಸಿದ್ದಾರೆ.
ಸೆನೆಟ್‌ನಲ್ಲಿ 51-49 ಮತಗಳಿಂದ ಎಫ್‌ಬಿಐ ನಿರ್ದೇಶಕನ ಹುದ್ದೆಗೆ ಆಯ್ಕೆಯಾದ ಕಾಶ್ ಅವರಿಗೆ ಅಟಾರ್ನಿ ಜನರಲ್ ಪಾಮ್ ಬೊಂದಿ ಶ್ವೇತ ಭವನದ ಆವರಣದಲ್ಲಿನ ಇಇಒಬಿ ಭವನದಲ್ಲಿ ಪ್ರಮಾಣ ಬೋಧಿಸಿದರು.ಈ ವೇಳೆ ಅವರ ಪರಿವಾರ ಹಾಗೂ ಪ್ರೇಯಸಿ ಉಪಸ್ಥಿತರಿದ್ದರು
ಪ್ರಮಾಣ ಸ್ವೀಕರಿಸಿ ಮಾತನಾಡಿದ ಪಟೇಲ್ ಮೊದಲ ತಲೆಮಾರಿನ ಭಾರತೀಯನಾದ ನಾನು ಅಮೆರಿಕದ ಕನಸನ್ನು ಈಡೇರಿಸುವೆ ಹಾಗೂ ಅಮೆರಿಕದ ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸಲಿದ್ದೇನೆ. ಇದು ಬೇರೆಲ್ಲೂ ಆಗಲು ಸಾದ್ಯವಿಲ್ಲ ಎಂದರು. ಜೊತೆಗೆ ಟ್ರಂಪ್ ಹಾಗೂ ತಮ್ಮ ಪರವಾಗಿ ಮತ ಚಲಾಯಿಸಿದ ಸಂಸದರಿಗೆ ಧನ್ಯವಾದ ಸಲ್ಲಿಸಿದರು.
ಪಟೇಲ್ ಅವರು ನ್ಯೂ ಯಾರ್ಕ್ನಲ್ಲಿ ಹುಟ್ಟಿದವರಾದರೂ, ಗುಜರಾತ್ ಮೂಲ ಹೊಂದಿದ್ದಾರೆ. ಇವರ ತಾಯಿ ತಾಂಜಾನಿಯಾ ಹಾಗೂ ತಂದೆ ಉಗಾಂಡಾದವರಾಗಿದ್ದು 1970ಯಲ್ಲಿ ಅಮೆರಿಕಕ್ಕೆ ಬಂದು ನೆಲೆಸಿದ್ದರು.

