Home » ವಿಮಾನದಲ್ಲೇ ಪ್ರಯಾಣಿಕರೊಬ್ಬರ ನಿಧನ
 

ವಿಮಾನದಲ್ಲೇ ಪ್ರಯಾಣಿಕರೊಬ್ಬರ ನಿಧನ

by Kundapur Xpress
Spread the love

ಲಕ್ನೋ : ದೆಹಲಿಯಿಂದ ಲಕ್ನೋಗೆ  ತೆರಳುತ್ತಿದ್ದ  ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಬಿಹಾರದ ಗೋಪಲ್ ಗಂಜ್ ನ ಐವತ್ತೆರಡು ವರ್ಷದ ಆಸಿಫುಲ್ಲಾ ಅನ್ಸಾರಿ ಮೃತ ದುರ್ದೈವಿಯಾಗಿದ್ದಾರೆ.

ವಿಮಾನ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು. ಈ ಸಂದರ್ಭ ಈ ವ್ಯಕ್ತಿ ಮಾತ್ರ ಕೆಳಗಿಳಿದಿರಲಿಲ್ಲ. ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಅವರು ಎಚ್ಚರವಾಗಿಲ್ಲ ವಿಮಾನದಲ್ಲಿದ್ದ ವೈದ್ಯರು ಪರೀಕ್ಷಿಸಿ ಆಸಿಫುಲ್ಲಾ ಅನ್ಸಾರಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ

 

Related Articles

error: Content is protected !!