Home » 4 ಮಹಡಿ ಕಟ್ಟಡ ಕುಸಿದು 2 ವರ್ಷದ ಮಗು ಸೇರಿ 6 ಜನರ ಸಾವು
 

4 ಮಹಡಿ ಕಟ್ಟಡ ಕುಸಿದು 2 ವರ್ಷದ ಮಗು ಸೇರಿ 6 ಜನರ ಸಾವು

by Kundapur Xpress
Spread the love

ನವದೆಹಲಿ : ರಾಷ್ಟ್ರರಾಜಧಾನಿ ದೆಹಲಿಯ ಈಶಾನ್ಯ ಭಾಗದಲ್ಲಿ 4 ಮಹಡಿಯ ಕಟ್ಟಡವೊಂದು ಕುಸಿದು 6 ಜನರು ಮೃತಪಟ್ಟಿದ್ದು, 8 ಜನರು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಈಶಾನ್ಯ ದೆಹಲಿಯ ಈದ್ದಾ ಬಳಿ ದುರ್ಘಟನೆ ಸಂಭವಿಸಿದೆ.

ಬೆಳಗ್ಗೆ 7 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಭಾರಿ ಸದ್ದು ಕೇಳಿದ್ದು, ಕಟ್ಟಡ ಕುಸಿದು ಬಿದ್ದಿದಲ್ಲದೆ ಇದರಿಂದಾಗಿ ಕಟ್ಟಡ ಮಾಲೀಕ ಸೇರಿ ಅವರ ಕುಟುಂಬದ ಆರು ಜನರು ಅಸುನೀಗಿದ್ದಾರೆ. ಅವರ ಹಿರಿಯ ಪುತ್ರ ಮತ್ತು ಪತ್ನಿ, ಅವರ 1 ವರ್ಷದ ಮಗು ಸೇರಿ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಟ್ಟಡ ಕುಸಿದ ರಭಸಕ್ಕೆ ಎದುರು ಕಟ್ಟಡಲ್ಲಿದ್ದವರಿಗೂ ಗಾಯಗಳಾಗಿವೆ. ಘಟನಾ ಸ್ಥಳದಲ್ಲಿ ವಿಪತ್ತು ನಿರ್ವಹಣಾ ಪಡೆ ರಕ್ಷಣೆ ಕಾರ್ಯ ಮಾಡುತ್ತಿದೆ.

 

Related Articles

error: Content is protected !!