Home » 23 ನಕ್ಸಲರ ಶರಣಾಗತಿ
 

23 ನಕ್ಸಲರ ಶರಣಾಗತಿ

by Kundapur Xpress
Spread the love

ರಾಯ್‌ಪು‌ರ್ :  ಮಾವೋವಾದಿ ಮಾನಸಿಕತೆಯಿಂದ ಬೇಸತ್ತಿರುವ ಛತ್ತೀಸ್ಗಢದ 23 ನಕ್ಸಲರು ಶನಿವಾರ ಸ್ಥಳೀಯ ಪೊಲೀಸ್ ಮತ್ತು ಕೇಂದ್ರ ಹೆಚ್ಚುವರಿ ಪೊಲೀಸ್‌ ಪಡೆ (ಸಿಆರ್ ಪಿಎಫ್) ಮುಂದೆ ಶರಣಾಗಿದ್ದಾರೆ. ಶರಣಾದ ನಕ್ಸಲರ ಮೇಲೆ 1.18 ಕೋಟಿ ರೂ. ಬಹುಮಾನವಿತ್ತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಶರಣಾದವರಲ್ಲಿ ಹನ್ನೊಂದು ಹಿರಿಯ ಮಾವೋವಾದಿಗಳಿದ್ದು, ಹೆಚ್ಚಿನವರು ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್ ನಂ.1 ರಲ್ಲಿ ಸಕ್ರಿಯವಾಗಿದ್ದವರು. ಹನ್ನೊಂದು ನಕ್ಸಲರಲ್ಲಿ ಪ್ರತಿಯೊಬ್ಬರ ಮೇಲೆ 8 ಲಕ್ಷ ರೂ. ಬಹುಮಾನವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಮಾಯಕ ಬುಡಕಟ್ಟು ಜನಾಂಗದವರ ಮೇಲೆ ನಡೆಸಿದ ಅಪರಾಧಗಳು, ನಕ್ಸಲರ ಮಧ್ಯೆ ಭಿನ್ನಾಭಿಪ್ರಾಯ ಹಾಗೂ ಮಾವೋವಾದಿ ಮನಸ್ಥಿತಿಯಿಂದ ನಿರಾಶೆಯಂತಹ ಕಾರಣಗಳಿಂದ ನಕ್ಸಲ್‌ವಾದ ತೊರೆದು ಶರಣಾಗಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ.

 

Related Articles

error: Content is protected !!