ಹೊಸದಿಲ್ಲಿ : ದಿಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ನಾಲ್ಕು ದಿನಗಳು ಬಾಕಿ ಉಳಿದಿರುವಂತೆ, ಆಮ್ ಆಧ್ಮಿ ಪಕ್ಷದ ಎಂಟು ಶಾಸಕರು ಶನಿವಾರ ಬಿಜೆಪಿ ಸೇರಿದ್ದಾರೆ. ಇವರಲ್ಲಿ ಏಳು ಮಂದಿಗೆ ಆಪ್ ಟಿಕೆಟ್ ನಿರಾಕರಿಸಿತ್ತು. ಶನಿವಾರ ದಿಲ್ಲಿ ಬಿಜೆಪಿ ಘಟಕದ ಅಧ್ಯಕ್ಷರ ಸಮ್ಮುಖದಲ್ಲಿ ವಂದನಾ ಗೌರ್, ರೋಹಿತ್ ಮೆಹುಲಿಯಾ, ಗಿರೀಶ್ ಸೋನಿ, ಮದನ್ ಲಾಲ್, ರಾಜೇಶ್ ರಿಶಿ, ಬಿಎಸ್ ಜೂನ್, ನರೇಶ್ ಯಾದವ್, ಪವನ್ ಶರ್ಮ ಪಕ್ಷಕ್ಕೆ ಸೇರ್ಪಡೆಯಾದರು. 7 ಮಂದಿಗೆ ಮೊದಲೇ ಟಿಕೆಟ್ ನಿರಾಕರಿಸಿ ದ್ದರಿಂದ ಈ ಎಲ್ಲರೂ ಶುಕ್ರವಾರವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆಪ್ ಬಿಡುವುದಾಗಿ ಘೋಷಿಸಿದ್ದರು.
ಆದರೆ, ಮೆಹೌಲಿ ಶಾಸಕ ನರೇಶ್ ಯಾದವ್‌ಗೆ ಆಪ್ ಟಿಕೆಟ್ ಘೋಷಣೆ ಮಾಡಿತ್ತು. ಪಂಜಾಬ್‌ನ ಸ್ಯಾಕ್ರಿಲೇಜ್ ಪ್ರಕರಣದಲ್ಲಿ ಇವರ ಪಾತ್ರ ಸಾಬೀತಾಗಿದ್ದರಿಂದ ಟಿಕೆಟ್ ನಿರಾಕರಿಸಿದ್ದರು. ಆಪ್ ಬೇರೆಯವರಿಗೆ ಟಿಕೆಟ್ ನೀಡಿತ್ತು. ಇವರೂ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಈಗ ಬಿಜೆಪಿಗೆ ಸೇರಿದ್ದಾರೆ. ಈಗ ಆಪ್ ಬಿಟ್ಟ ಎಲ್ಲ ಶಾಸಕರೂ ಕೇಜಿವಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಿಮ್ಮ ಮತ್ತು ಪಕ್ಷದ ಮೇಲೆ ನಂಬಿಕೆ ಕಡಿಮೆಯಾಗಿದೆ ಎಂದು ಆರೋಪಿಸಿದ್ದಾರೆ.