Home » ದಿಲ್ಲಿ ಜನರಿಗೆ ಕಣ್ಣೀರು ಮತ್ತು ತುರಿಕೆ
 

ದಿಲ್ಲಿ ಜನರಿಗೆ ಕಣ್ಣೀರು ಮತ್ತು ತುರಿಕೆ

by Kundapur Xpress
Spread the love

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯ ದ್ವಾರಕಾ, ಮುಂಡ್ಯಾ ಮತ್ತು ಜನಪಥ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನ ಗರಿಷ್ಠ 500 ಎಕ್ಯುಐ ದಾಖಲಾಗಿದ್ದು ದಟ್ಟ ಹೊಗೆ ಆವರಿಸಿದ್ದರಿಂದ ಜನರಿಗೆ ತುರಿಕೆ ಮತ್ತು ಕಣ್ಣುಗಳಲ್ಲಿ ನೀರು ಬರುವ ಸಮಸ್ಯೆ ಎದುರಾಗಿದೆ

ನಗರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಸೋಮವಾರ ಬೆಳಗ್ಗೆ 8 ಗಂಟೆಗೆ 484 ಕ್ಕೆ ದಾಖಲಾಗಿದ್ದು ಇದು ಇಲ್ಲಿಯವರೆಗಿನ ಅತ್ಯಂತ ಕಳಪೆ ವಾಯು ಗುಣಮಟ್ಟವಾಗಿದೆ. ಮಧ್ಯಾಹ್ನ 2 ಗಂಟೆಯ ವೇಳೆಗೆ, ಎಕ್ಯುಐ ಮತ್ತಷ್ಟು ಹದಗೆಟ್ಟಿದ್ದು 491 ಕ್ಕೆ ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ. ನಗರದ ಗಾಳಿಯ ಗುಣಮಟ್ಟವು ತೀವ್ರ ಹದಗೆಟ್ಟಿರುವುದರಿಂದ ಎಲ್ಲರಿಗೂ ಆರೋಗ್ಯ ಅಪಾಯಗಳ ಬಗ್ಗೆ ವೈದ್ಯರು ಎಚ್ಚರಿಸಿದ್ದಾರೆ.

   

Related Articles

error: Content is protected !!