ವಾಷಿಂಗ್ಟನ್ : ಅಮೆರಿಕಾದ 39 ನೇ ಅಧ್ಯಕ್ಷ ಮತ್ತು ಭಾರತಕ್ಕೆ ಭೇಟಿ ನೀಡಿದ ಮೂರನೇ ಅಮೆರಿಕನ್ ಅಧ್ಯಕ್ಷ ಜಿಮ್ಮಿ ಕಾರ್ಟರ್ ಜಾರ್ಜಿಯಾದ ಪ್ಲೇನ್ಸ್ ನಲ್ಲಿರುವ ತಮ್ಮ ಮನೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. 100 ವರ್ಷ ಬದುಕಿದ್ದ ಕಾರ್ಟ್ ಅಮೆರಿಕಾದ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ಬದುಕಿದ್ದ ಅಧ್ಯಕ್ಷ ಎನಿಸಿದ್ದಾರೆ.
ಜಿಮ್ಮಿ ಕಾರ್ಟರ್ 1977ರಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿದ ನಂತರ ಜನತಾ ಪಕ್ಷದ ವಿಜಯದ ನಂತರ ಭಾರತಕ್ಕೆ ಭೇಟಿ ನೀಡಿದ ಮೊದಲ ಅಮೆರಿಕನ್ ಅಧ್ಯಕ್ಷರಾಗಿದ್ದರು. ಭಾರತೀಯ ಸಂಸತ್ತನ್ನುದ್ದೇಶಿಸಿ 1978ರ ಜನವರಿ 2 ರಂದು ಮಾಡಿದ ಭಾಷಣದಲ್ಲಿ ಕಾರ್ಟ್ ಸರ್ವಾಧಿಕಾರಿ ಆಡಳಿತದ ವಿರುದ್ಧ ಮಾತನಾಡಿದ್ದರು
ಪ್ರಧಾನಿ ಮೋದಿ ಸಂತಾಪ
ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂತಾಪ ಸೂಚಿಸಿದ್ದಾರೆ. ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ದಣಿವರಿಯದೆ ಕೆಲಸ ಮಾಡಿದ ಮಹಾನ್ ದೂರ ದೃಷ್ಟಿಯ ರಾಜನೀತಿಜ್ಞ ಎಂದು ಶ್ಲಾಘಿಸಿದ್ದಾರೆ. ಬಲವಾದ ಭಾರತ- ಅಮೆರಿಕವನ್ನು ಬೆಳೆಸುವಲ್ಲಿ ಅವರ ಕೊಡುಗೆಗಳು. ಸಂಬಂಧಗಳು ಶಾಶ್ವತ ಪರಂಪರೆಯನ್ನು ಬಿಟ್ಟು ಹೋಗುತ್ತವೆ. ಅವರ ಕುಟುಂಬ, ಸ್ನೇಹಿತರು, ಅಮೆರಿಕ ಜನರಿಗೆ ನನ್ನ ಸಂತಾಪಗಳು ಎಂದು ಮೋದಿ ಹೇಳಿದರು.