119
ರಿಯೋ ಡಿ ಜನೈರೋ : ಜಿ 20 ಶೃಂಗದಲ್ಲಿ ಪಾಲ್ಗೊಳ್ಳಲು ಬ್ರೆಜಿಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶೃಂಗಕ್ಕೆ ಬಂದಿರುವ ವಿಶ್ವನಾಯಕರ ಜತೆ ಫಲಪ್ರದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಜತೆ ಇಟಲಿ-ಭಾರತ ಸಂಬಂಧದ ಮುಂದಿನ 5 ವರ್ಷಗಳ ಕ್ರಿಯಾ ಯೋಜನೆ ಯನ್ನು ಮೋದಿ ಅಂತಿಮಗೊಳಿಸಿದ್ದಾರೆ. ಈ ಪ್ರಕಾರ ರಕ್ಷಣೆ, ವ್ಯಾಪಾರ, ಸ್ವಚ್ಛ ಇಂಧನ ಸೇರಿ ಹಲವು ವಲಯಗಳಲ್ಲಿ ಉಭಯ ದೇಶಗಳು ಸಹಕರಿಸಲಿವೆ.
ಇನ್ನು ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಭೇಟಿ ಮಾಡಿದ ಮೋದಿ, ಭಾರತ-ಬ್ರಿಟನ್ ನಡುವೆ ಮಾತುಕತೆಗಳಿಗೆ ಮರುಚಾಲನೆ ನೀಡಲು ಸಮ್ಮತಿಸಿದ್ದಾರೆ.

