Home » ವನ್ಯ ಜೀವಿ ರಕ್ಷಿತಾರಣ್ಯಕ್ಕೆ ಪ್ರಧಾನಿ ಮೋದಿ ಭೇಟಿ
 

ವನ್ಯ ಜೀವಿ ರಕ್ಷಿತಾರಣ್ಯಕ್ಕೆ ಪ್ರಧಾನಿ ಮೋದಿ ಭೇಟಿ

by Kundapur Xpress
Spread the love

ಸಾಸನ್ (ಗುಜರಾತ್ ): ವಿಶ್ವ ವನ್ಯಜೀವಿಗಳ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಗುಜರಾತ್‌ನ ಜುನಾಗಢದಲ್ಲಿರುವ ಗಿರ್ ವನ್ಯಜೀವಿ ರಕ್ಷಿತಾರಣ್ಯಕ್ಕೆ ಭೇಟಿ ನೀಡಿದರು. ಈ ವೇಳೆ ಏಷ್ಯಾದ ಸಿಂಹಗಳ ರಕ್ಷಣೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಇಂದು ನಾನು ಏಷ್ಯಾದ ಸಿಂಹಗಳ ಆವಾಸ ಸ್ಥಾನವಾದ ಗಿರ್ ವನ್ಯಜೀವಿ ರಕ್ಷಿತಾ ರಣ್ಯಕ್ಕೆ ಭೇಟಿ ನೀಡಿದೆ. ಈ ಭೇಟಿಯು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗಿರ್ ವನ್ಯಜೀವಿಧಾಮಕ್ಕಾಗಿ ನಾವು ಮಾಡಿದ ಕೆಲಸಗಳ ನೆನಪು ಹಸಿರಾಗಿಸಿತು.

ಕಳೆದ ಕೆಲ ವರ್ಷಗಳ ಸಮಗ್ರ ಪ್ರಯತ್ನದ ಫಲವಾಗಿ ಗಿರ್‌ನಲ್ಲಿ ಏಷ್ಯಾದ ಸಿಂಹಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಸಿಂಹಗಳ ಆವಾಸಸ್ಥಾನ ರಕ್ಷಣೆಯಲ್ಲಿ ಈ ಪ್ರದೇಶದ ಸುತ್ತಮುತ್ತ ವಾಸಿಸುವ ಗುಡ್ಡಗಾಡು ಜನ ಹಾಗೂ ಮಹಿಳೆಯರೂ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

Related Articles

error: Content is protected !!