137
ನವದೆಹಲಿ : ಮದುವೆ ಸೀಸನ್ ಭರಾಟೆ ನಡುವೆಯೇ ಚಿನ್ನದ ದರ ಬುಧವಾರ ದಿಲ್ಲಿ ಮಾರುಕಟ್ಟೆಯಲ್ಲಿ 900 ರು. ಏರಿದ್ದು, 10 ಗ್ರಾಂ ಚಿನ್ನದ ಬೆಲೆ 89,400 ರು.ಗೆ ನೆಗೆದಿದೆ. ಇದು ಸಾರ್ವಕಾಲಿಕ ಗರಿಷ್ಠವಾಗಿದೆ. ಶೇ.99.9 ಶುದ್ಧತೆಯ ಚಿನ್ನದ ಬೆಲೆ ಹಿಂದಿನ ದಿನ 88,500 ರು.ಗೆ ಇದ್ದಿದ್ದು, 89,400 ರು.ಗೆ ಬುಧವಾರ ಏರುವ ಮೂಲಕ ಫೆ.14ರಂದು ತಲುಪಿದ್ದ ಬೆಲೆಯನ್ನು ಮತ್ತೆ ತಲುಪಿತು.

