Home » ಚಿನ್ನದ ದರ ಎರಿಕೆ : ಸರ್ವಕಾಲಿಕ ದಾಖಲೆ
 

ಚಿನ್ನದ ದರ ಎರಿಕೆ : ಸರ್ವಕಾಲಿಕ ದಾಖಲೆ

by Kundapur Xpress
Spread the love

ನವದೆಹಲಿ : ಚಿನ್ನದ ಬೆಲೆ ಏರಿಕೆ ಪರ್ವ ಮುಂದುವರೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಒಂದೇ ದಿನ 6250 ರು. ಏರಿಕೆಯಾಗಿ, 96,450 ರು.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆ ಬರೆದಿದೆ. ಸ್ಥಳೀಯ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಚಿನ್ನಕ್ಕೆ ಭಾರೀ ಬೇಡಿಕೆ ಸೃಷ್ಟಿಯಾದ ಕಾರಣ ದರದಲ್ಲಿ ಏರಿಕೆಯಾಗಿದೆ. ಇದರ ಜೊತೆಗೆ ಅಮೆರಿಕ ಮತ್ತು ಚೀನಾದ ನಡುವಿನ ಸುಂಕ ಸಮರದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿದೆ. ಇದರಿಂದ ಭಾರತದಲ್ಲೂ ಬೆಲೆ ಏರಿದೆ ಎಂದು ವಿಶ್ಲೇಷಿಸಲಾಗಿದೆ.

ದಿಲ್ಲಿಯಲ್ಲಿ ಶುಕ್ರವಾರ 99.9 ಶುದ್ಧತೆಯ ಚಿನ್ನ, 10 ಗ್ರಾಂಗೆ 6250 ಏರಿಕೆ ಯೊಂದಿಗೆ 96,450 ರು.ಗೆ ತಲುಪಿದೆ. ಗುರುವಾರ 90,200 ರು. ಇತ್ತು. ಇನ್ನು ಬೆಳ್ಳಿ ಬೆಲೆಯೂ ಏರಿಕೆ ಕಂಡಿದ್ದು, ಪ್ರತಿ ಕೇಜಿಗೆ 2300 ರು.ಗಳಷ್ಟು ಏರಿಕೆಯಾಗಿದ್ದು, 95,500 ರು.ಗೆ ತಲುಪಿದೆ.

 

Related Articles

error: Content is protected !!