Home » ಚಿನ್ನ ನಿನ್ನೆ ಒಂದೇ ದಿನ  3600 ಏರಿಕೆ
 

ಚಿನ್ನ ನಿನ್ನೆ ಒಂದೇ ದಿನ  3600 ಏರಿಕೆ

ಟ್ರಂಪ್‌ ತೆರಿಗೆ ಪರಿಣಾಮ ಬಂಗಾರ ಬೆಲೆ ತುಟ್ಟಿ

by Kundapur Xpress
Spread the love

ನವದೆಹಲಿ : ಚಿನ್ನದ ಬೆಲೆ ಗುರುವಾರ ಒಂದೇ ದಿನ 10 ಗ್ರಾಂಗೆ ಭರ್ಜರಿ 3600 ರೂಪಾಯಿ ಏರಿಕೆಯಾಗಿದೆ. ಪರಿಣಾಮ ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧತೆಯ ಚಿನ್ನದ ಬೆಲೆ 1,06,100 ಕ್ಕೆ ತಲುಪಿದೆ.

ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.50ರಷ್ಟು ತೆರಿಗೆ ಹೇರಿದ್ದು ಮತ್ತು ಅದರ ಪರಿಣಾಮಗಳ ಭೀತಿಯಿಂದಾಗಿ ಹೂಡಿಕೆದಾರರು ಷೇರುಪೇಟೆ ಬದಲಾಗಿ ಚಿನ್ನದತ್ತ ಮುಖ ಮಾಡಿದ್ದು ದಿಢೀರ್ ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ.

ಇದು ದೇಶದಲ್ಲಿ ಚಿನ್ನದ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯು ಕೇಜಿಗೆ 1500 ರು. ಏರಿಕೆಯಾಗಿದೆ

 

Related Articles

error: Content is protected !!