ನವದೆಹಲಿ : ಉತ್ತರಪ್ರದೇಶದ ಬದಾಯೂಂನಲ್ಲಿ ಇತ್ತೀಚಿಗೆ ಗೂಗಲ್‌ಮ್ಯಾಪ್‌ನ ಎಡವಟ್ಟಿನಿಂದ ಕಾರೊಂದು ಮುರಿದು ಬಿದ್ದ ಸೇತುವೆಯಿಂದ ಕೆಳಗೆ ಉರುಳಿ ಮೂವರು ಸಾವನ್ನಪ್ಪಿದ ಪ್ರಕರಣದಲ್ಲಿ ಗೂಗಲ್ ಮ್ಯಾಪ್ ಮತ್ತು ನಾಲ್ವರು ಎಂಜೀ ನಿಯರ್‌ಗಳ ವಿರುದ್ಧ ಪ್ರಕರಣ ದಾಖಲಿ ಸಲಾಗಿದೆ.
ಇತ್ತೀಚಿನ ಪ್ರವಾಹಕ್ಕೆ ಸೇತುವೆ ಕೊಚ್ಚಿ ಹೋಗಿತ್ತು. ಪರಿಣಾಮ ರಸ್ತೆ ಕಟ್ ಆಗಿತ್ತು. ಆದರೆ ಈ ಮಾಹಿತಿ ಗೂಗಲ್ ಮ್ಯಾಪ್‌ನಲ್ಲಿ ದಾಖಲಾಗಿರಲಿಲ್ಲ. ಇದನ್ನು ತಿಳಿಯದೇ ಕಾರು ಸೇತುವೆ ಮೇಲೆ ಚಲಿಸಿದ ಪರಿಣಾಮ ಗೊತ್ತಾಗದೇ ನದಿಗೆ ಬಿದ್ದಿತ್ತು. ಅದರಲ್ಲಿದ್ದ ಮೂವರು ಸಾವನ್ನಪ್ಪಿದ್ದರು. ಈ ಕುರಿತು ಎಚ್ಚರಿಕೆ ಫಲಕ ಹಾಕಿರದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ 4 ಎಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.