Home » ಚೀನಾ ಬಳಿಕ ಜಪಾನ್‌ ಹಾಂಕಾಗ್‌ಗೂ ವೈರಸ್‌ ಲಗ್ಗೆ
 

ಚೀನಾ ಬಳಿಕ ಜಪಾನ್‌ ಹಾಂಕಾಗ್‌ಗೂ ವೈರಸ್‌ ಲಗ್ಗೆ

by Kundapur Xpress
Spread the love

ಬೀಜಿಂಗ್ : ಚೀನಾದಲ್ಲಿ ಕೊರೋನಾ ವೈರಸ್ ಮಾದರಿಯ ಎಚ್‌ಎಂಪಿಎ (ಹೂಮನ್ ಮೆಟಾನ್ಯುಮೋ ವೈರಸ್) ಸೋಂಕು ಹರಡಿ ಭಾರೀ ಆತಂಕ ಹುಟ್ಟುಹಾಕಿರುವಾಗಲೇ, ಅತ್ತ ಜಪಾನ್ ಮತ್ತು ಸಿಂಗಾಪುರ ದೇಶಗಳಲ್ಲೂ ಇದೇ ಸೋಂಕಿನ ವೈರಸ್ ಭಾರೀ ಪ್ರಮಾಣದಲ್ಲಿ ವ್ಯಾಪಿಸಿರುವ ಸುದ್ದಿ ಹೊರಬಿದ್ದಿದೆ. 

ಜಪಾನ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ಮಾಧ್ಯಮ ವರದಿ ಪ್ರಕಾರ, ಡಿ. 15 ವರೆಗೆ ಒಂದೇ ವಾರದಲ್ಲಿ 94,259 ಜನರು ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ಪ್ರಸ್ತುತ ಜಪಾನ್ ನಲ್ಲಿರುವ ಸೋಂಕಿಗೆ ತುತ್ತಾದವರ ಸಂಖ್ಯೆ 718,000ಕ್ಕೆ ತಲು ಪಿದೆ. ಸದ್ಯ ದೇಶದಲ್ಲಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಸೋಂಕು ಇನ್ನಷ್ಟು ವ್ಯಾಪಕವಾಗುವ ಆತಂಕವೂ ಎದುರಾಗಿದೆ

ಇನ್ನೊಂದೆಡೆ ಚೀನಾದ ನೆರೆಯ ದೇಶವಾದ ಹಾಂಕಾಂಗ್‌ನಲ್ಲೂ ಸೋಂಕು ವ್ಯಾಪಿಸಿದೆ. ಚೀನಾ ಹಾಗೂ ಜಪಾನ್‌ನಷ್ಟು ಅಲ್ಲದಿದ್ದರೂ, 1000ಕ್ಕೂ ಹೆಚ್ಚು ಹೆಚ್ ಎಂಪಿವಿ ಪ್ರಕರಣಗಳ ದಾಖಲಾಗಿವೆ.

ಈ ಹಿಂದೆ ಕೋವಿಡ್ ವೈರಸ್ ಚಳಿಗಾಲದ ವೇಳೆ ಚೀನಾದಲ್ಲಿ ವ್ಯಾಪಕವಾ ದಾಗ ಅತ್ತ ಜಪಾನ್ ಮತ್ತು ಹಾಂಕಾಂಗ್ ನಲ್ಲೂ ಹೆಮ್ಮಾರಿಯಂತೆ ಹರಡಿ ಸಾವಿರಾರು ಜನರನ್ನು ಬಲಿಪಡೆದಿತ್ತು.

 

Related Articles

error: Content is protected !!