Home » ಆತಂಕ ಬೇಡ ಸೋಂಕು ಎದುರಿಸಲು ಭಾರತ ಸಜ್ಜು
 

ಆತಂಕ ಬೇಡ ಸೋಂಕು ಎದುರಿಸಲು ಭಾರತ ಸಜ್ಜು

ಎಚ್ಚರಿಕೆಯ ಕ್ರಮ ವಹಿಸಿ

by Kundapur Xpress
Spread the love

ನವದೆಹಲಿ : ಚೀನಾದಲ್ಲಿ ಎಚ್ಎಂಪಿಎ ಸೋಂಕು ವ್ಯಾಪಕವಾದ ಬೆನ್ನಲ್ಲೇ ಭಾರತದಲ್ಲೂ ಉಸಿರಾಟ ಸಂಬಂಧಿ  ಆರೋಗ್ಯ ಸಮಸ್ಯೆಗಳ ಮೇಲೆ ನಿಗಾ ಇಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಸದ್ಯಕ್ಕೆ ದೇಶದಲ್ಲಿ ಆತಂಕಪಡಬೇಕಾದ ಯಾವುದೇ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಅಭಯ ನೀಡಿದೆ. ಈ ಕುರಿತು ಆರೋಗ್ಯ ಸೇವೆಗಳ ಮಹಾನಿರ್ದೇಶಕರಾದ ಡಾ. ಅತುಲ್ ಗೋಯಲ್ ಪ್ರತಿಕ್ರಿಯೆ ನೀಡಿದ್ದಾರೆ. 

ಏನಿದು ಸೋಂಕು ?

ಎಚ್‌ ಎಂ ಪಿ ವಿ ಅಥವಾ ಹ್ಯೂಮನ್‌ ಮೆಟಾ ನ್ಯೂಮೋವೈರಸ್, ಉಸಿರಾಟದ ಸಮಸ್ಯೆಗೆ ಕಾರಣವಾಗುವ ವೈರಸ್. ಇದು ಎಲ್ಲಾ ವಯೋಮಾನದವರಲ್ಲೂ ಕಾಣಿಸಿಕೊಳ್ಳಬಹುದು. ಹೆಚ್ಚಾಗಿ ಮಕ್ಕಳು ಹಾಗೂ ವೃದ್ಧರು ಹಾಗೂ ರೋಗ ನಿರೋಧಕ ಶಕ್ತಿಯ ಕೊರತೆ ಇರುವವರನ್ನು ಬಾಧಿಸುತ್ತದೆ. 20 ವರ್ಷಗಳ ಹಿಂದೆ ಮೊದಲ ಬಾರಿ ಇದು ಕಾಣಿಸಿತ್ತು.

ಸೋಂಕು ಹರಡುವಿಕೆ

ಕೆಮ್ಮುವಾಗ ಅಥವಾ ಸೀನುವಾಗ ಹೊರ ಬರುವ ಕಣಗಳಿಂದ ಈ ಸೋಂಕು ಹರಡುತ್ತದೆ. ಸೋಂಕಿತರ ಸಂಪರ್ಕಕ್ಕೆ ಬರುವು ದರಿಂದ ಹಾಗೂ ಕಲುಷಿತ ವಾತಾವರಣಕ್ಕೆ ತೆರೆದು ಕೊಳ್ಳುವುದರಿಂದಲೂ ಎಚ್‌.ಎಂ ಪಿ ವಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ

ರೋಗಲಕ್ಷಣಗಳು

ಕೆಮ್ಮು, ಶೀತ, ಜ್ವರ, ಗಂಟಲು ನೋವು, ಉಬ್ಬಸ, ಉಸಿರಾಟದಲ್ಲಿ ತೊಂದರೆ ಸೇರಿದಂತೆ ಕೊರೋನಾದ ಸೌಮ್ಯ ಲಕ್ಷಣಗಳು ಎಚ್‌.ಎಂಪಿವಿ ಸೋಂಕಿತರಲ್ಲಿ ಕಂಡುಬರುತ್ತವೆ.

ಮುನ್ನೆಚ್ಚರಿಕೆ ಏನು ?

ಮಾಸ್ಕ್ ಧರಿಸಿ. ಕಮ್ಮು-ನೆಗಡಿ, ಜ್ವರ ಇದ್ದರೆ ಪ್ರತ್ಯೇಕವಾಗಿರಿ ವೈದ್ಯರ ಬಳಿ ಹೋಗಿ, ಸ್ಯಾನಿಟೈಸರ್ ಬಳಸಿ. ಸ್ವಚ್ಛತೆ ಕಾಪಾಡಿಕೊಳ್ಳಿ

 

Related Articles

error: Content is protected !!