125
ಟೆಲ್ ಅವಿವ್ : ಹಮಾಸ್‌ನ ಗಾಜಾ ನಾಯಕ ಯಾಹ್ಯಾ ಸಿಂವಾರ್ ಸಹೋದರ ಮುಹಮ್ಮದ್ ಸಿಂವಾರ್‌ನನ್ನು ಇಸ್ರೇಲ್ ಪಡೆಗಳು ಹತ್ಯೆಮಾಡಿವೆ. ಈ ಸಂಬಂಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೇ ಬುಧವಾರ ಘೋಷಣೆ ಮಾಡಿದ್ದಾರೆ.
ಹಮಾಸ್‌ನ ಈ ಹಿಂದಿನ ನಾಯಕ ಯಾಹ್ಯಾ ಸಿಂವಾರ್‌ನನ್ನು ಕಳೆದ ಅಕ್ಟೋಬರ್‌ನಲ್ಲಿ ಇಸ್ರೇಲ್ ಸೇನೆ ಹತ್ಯೆ ಮಾಡಿತ್ತು. ಇದಾದ ಬಳಿಕ ಮುಹಮ್ಮದ್ ಸಿಂವಾರ್‌ನನ್ನು ಹಮಾಸ್‌ನ ಗಾಜಾದ ನಾಯಕನನ್ನಾಗಿ ಮಾಡಲಾಗಿತ್ತು.
ಈ ತಿಂಗಳ ಆರಂಭದಲ್ಲಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ ಅವರು, ಗಾಜಾದ ಮೇಲೆ ನಡೆದ: ವಾಯುದಾಳಿಯಲ್ಲಿ ಮುಹಮ್ಮದ್ ಸಿಂವಾರ್ ಬಹುಶಃ ಹತ್ಯೆಗೀಡಾಗಿದ್ದಾನೆ ಎಂದು ಹೇಳಿದ್ದರು.

