62
ನವದೆಹಲಿ : ಕಣಿವೆ ರಾಜ್ಯದಲ್ಲಿ ಸುರಿದ ಭಾರೀ ಮಳೆ ಮತ್ತು ಅದರಿಂದ ಸಂಭವಿಸಿದ ಭಾರೀ ಗುಡ್ಡಕುಸಿತ ಮತ್ತಿತರೆ ಅನಾಹುತದ ಘಟನೆಗಳಿಗೆ ಬಲಿಯಾದವರ ಸಂಖ್ಯೆ 41ಕ್ಕೆ ತಲುಪಿದೆ. ಈ ಪೈಕಿ 34 ಜನರು ಕೇವಲ ವೈಷ್ಟೋದೇವಿ ಯಾತ್ರೆ ಮಾರ್ಗದಲ್ಲಿ ಸಂಭವಿಸಿದ ಭೂಕುಸಿತವೊಂದ ರಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಈ ನಡುವೆ ಕಾಶ್ಮೀರ ಮಾತ್ರವಲ್ಲದೇ ಪಂಜಾಬ್, ಹಿಮಾಚಲ ಪ್ರದೇಶದಲ್ಲೂ ಒಡಿಶಾ, ವರ್ಷಧಾರೆ ಭಾರೀ ಅನಾಹುತ ಸೃಷ್ಟಿಸಿದೆ.
41 ಸಾವು :
ಮಂಗಳವಾರ ಭಾರೀ ಮಳೆ ಮತ್ತು ಭೂಕುಸಿತಕ್ಕೆ ಸಾಕ್ಷಿಯಾಗಿದ್ದ ಜಮ್ಮುವಿನಲ್ಲಿ ಬುಧವಾರವೂ ಮಳೆ ಅನಾಹುತದ ಘಟನೆಗಳು ಮುಂದುವರೆದವು. ಇದರ ಜೊತೆಗೆ ಮಂಗಳವಾರ ದುರ್ಘಟನೆ ಸಂಭವಿಸಿದ ಪ್ರದೇಶಗಳಲ್ಲಿ ಮತ್ತಷ್ಟು ಜನರ ಶವಗಳು ಪತ್ತೆಯಾಗುವುದರೊಂದಿಗೆ 2 ದಿನದಲ್ಲಿ ರಾಜ್ಯದಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 41ಕ್ಕೆ ತಲುಪಿದೆ.

