121
ಹೊಸದಿಲ್ಲಿ : ರಾಜ್ಯಸಭಾ ಸದಸ್ಯರು ಆಗಿರುವ ಖ್ಯಾತ ಸಂಗೀತ ಸಂಯೋಜಕ ಇಳಯರಾಜಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿಯಾಗಿದ್ದಾರೆ. ಇತ್ತೀಚೆಗೆ ಇಳಯರಾಜಾ ಲಂಡನ್‌ನಲ್ಲಿ ರಾಯಲ್ ಪಿಲ್ಲಾರ್ಮೋನಿಕ್ ಆರ್ಕೆಸ್ಟ್ರಾ ತಂಡದೊಂದಿಗೆ ಜಾಗತಿಕವಾಗಿ ಸಂಗೀತ ಮೇಳ ಕಾರ್ಯಕ್ರಮ ಪ್ರದರ್ಶನ ಕೈಗೊಂಡು ಇತಿಹಾಸ ಸೃಷ್ಟಿಸಿದ್ದರು.
ಈ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದ್ದರು. ನಮ್ಮ ಸಂಗೀತ ಮತ್ತು ಸಂಸ್ಕೃತಿಯ ಮೇಲೆ ಸ್ಮರಣೀಯ ಪ್ರಭಾವ ಬೀರಿದ ಸಂಗೀತ ದಿಗ್ಗಜ ರಾಜ್ಯಸಭಾ ಸಂಸದ ಇಳಯರಾಜಾ ಅವರನ್ನು ಭೇಟಿಯಾಗಿರುವುದು ಸಂತೋಷವಾಗಿದೆ. ಅವರು ಕೆಲವು ದಿನಗಳ ಹಿಂದೆ ಲಂಡನ್‌ನಲ್ಲಿ ತಮ್ಮ ಮೊದಲ ಪಾಶ್ಚಾತ್ಯ ಶಾಸ್ತ್ರೀಯ ಸಿಂಫೋನಿಯಾದ ವೆಲಿಯಂಟ್ ಅನ್ನು ಪ್ರಸ್ತುತಪಡಿಸುವ ಮೂಲಕ ಮತ್ತೊಮ್ಮೆ ಇತಿಹಾಸವನ್ನು ನಿರ್ಮಿಸಿದ್ದಾರೆ ಎಂದು ಮೋದಿ ನುಡಿದರು

