130
ಟೆಹ್ರಾನ್ : ಒಂಬತ್ತು ದಿನಗಳಿಂದ ನಡೆಯುತ್ತಿದ್ದ ಇಸ್ರೇಲ್ -ಇರಾನ್ ಸಂಘರ್ಷಕ್ಕೆ ಇದೀಗ ಅಮೆರಿಕ ನೇರ ಪ್ರವೇಶ ಮಾಡಿದೆ. ಸಂಧಾನಕ್ಕಾಗಿ ಒಂದು ವಾರಗಳ ಗಡುವು ನೀಡಿದ ಬೆನ್ನಲ್ಲೇ, ಭಾನುವಾರ ಮುಂಜಾನೆ ಇರಾನ್‌ನ 3 ಪ್ರಮುಖ ಪರಮಾಣು ಕೇಂದ್ರ ಗಳನ್ನು ಗುರಿಯಾಗಿಸಿ ಅಮೆರಿಕ ಭೀಕರ ದಾಳಿ ನಡೆಸಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಮರ ಮತ್ತಷ್ಟು ತೀವ್ರಗೊಳ್ಳುವ ಆತಂಕ ಮನೆಮಾಡಿದೆ.
ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಹೆಸರಿನ ಈ ತಡರಾತ್ರಿ ಕಾರ್ಯಾಚರಣೆಗೆ 125 ಯುದ್ಧ ವಿಮಾನ, 14 ಬಾಂಬರ್, 40 ಕ್ಷಿಪಣಿ ಬಳಸಿದ ಅಮೆರಿಕ ಇರಾನ್ ಬೆಟ್ಟಗುಡ್ಡಗಳ ತಳದಲ್ಲಿ ನಿರ್ಮಿಸಿರುವ ಫೋರ್ಡೋ, ಇಸಹಾನ್ ಮತ್ತು ನಟಾಂಝ್ ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿದೆ. ದಾಳಿಗೆ ತಲಾ 13,600 ಕೆ.ಜಿ.ತೂಕದ ಬಂಕರ್‌ಬಸ್ಟರ್ ಬಾಂಬ್, ಅತ್ಯಾಧುನಿಕ ಬಿ-2 ವಿಮಾನ ಮತ್ತು 24 ಟಾಮ್ ಹಾಕ್ ಕ್ಷಿಪಣಿ ಸೇರಿ 40 ಕ್ಷಿಪಣಿ ಬಳಸಲಾಗಿದೆ. ಈ ಮೂಲಕ 40 ವರ್ಷ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕವು ಇರಾನ್ ಮೇಲೆ ನೇರ ದಾಳಿ ನಡೆಸಿದಂತಾಗಿದೆ

