63
ಟೊಕಿಯೋ : ಭಾರತ ಮತ್ತು ಜಪಾನ್ ನಡುವಿನ 15ನೇ ವಾರ್ಷಿಕ ಸಭೆಯ ಬಳಿಕ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಭಾರತ ಮತ್ತು ಜಪಾನ್ ಶುಕ್ರವಾರ ಜಂಟಿ ಹೇಳಿಕೆ ಬಿಡುಗಡೆಗೊಳಿಸಿವೆ.
ಪಹಲ್ಗಾಮ್ ದಾಳಿ ಹಿಂದಿರುವ ಭಯೋತ್ಪಾದಕರು, ಸಂಚುಕೋರರು, ಸಂಘಟಕರು ಮತ್ತು ಹಣಕಾಸು ನೆರವು ನೀಡಿದವರಿಗೆ ತಕ್ಷಣವೇ ಕಠಿಣ ಶಿಕ್ಷೆ ಆಗಬೇಕು ಎಂದು ಜಂಟಿ ಹೇಳಿಕೆ ಪ್ರಕಟಿಸಿವೆ. ಅಲ್-ಖೈದಾ, ಐಸಿಸ್/ದಾಯಿಶ್, ಲಷ್ಕರ್-ಎ-ತೈಬಾ(ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ) ಸಹಿತ ಎಲ್ಲಾ ವಿಶ್ವಸಂಸ್ಥೆ ಗುರುತಿಸಲ್ಪಟ್ಟ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಜಂಟಿ ಕರೆ ನೀಡಿವೆ.

