Home » ದೇಶದ ವಿತ್ತ ಶಕ್ತಿಯನ್ನು ಜಗತ್ತಿಗೆ ಸಾರಿದ ಪ್ರಧಾನಿ ಮೋದಿ
 

ದೇಶದ ವಿತ್ತ ಶಕ್ತಿಯನ್ನು ಜಗತ್ತಿಗೆ ಸಾರಿದ ಪ್ರಧಾನಿ ಮೋದಿ

by Kundapur Xpress
Spread the love

ಟೋಕಿಯೊ : ಭಾರತ ಜಗತ್ತಿನಲ್ಲಿ ಅತ್ಯಂತ ಕ್ಷಿಪ್ರಗತಿಯಿಂದ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಭಾರತದ ರಾಜಕೀಯ ಮತ್ತು ಆರ್ಥಿಕ ಸ್ಥಿರತೆ ಹಾಗೂ ನೀತಿ ನಿಯಮಗಳಲ್ಲಿನ ಪಾರದರ್ಶಿತ್ವದಿಂದಾಗಿ ರಾಷ್ಟ್ರವು ಮುಖ್ಯವಾಗಿ ಹಸಿರು ಇಂಧನ, ಉತ್ಪಾದನೆ ಮತ್ತು ತಂತ್ರಜ್ಞಾನ ರಂಗಗಳಲ್ಲಿ ಆಕರ್ಷಕ ಹೂಡಿಕೆಯ ಕೇಂದ್ರವಾಗಿ ಪರಿವರ್ತಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕದ ಸುಂಕಾಸ್ತ್ರದ ಮಧ್ಯೆ, ಭಾರತ ಆರ್ಥಿಕವಾಗಿ ಬಲಿಷ್ಠವಾಗಿರುವ ವಾಸ್ತವವನ್ನು ಪ್ರಧಾನಿ ಮೋದಿ ಜಗತ್ತಿಗೆ ಸಾರಿದ್ದಾರೆ

 

ಭಾರತ ರಷ್ಯಾದಿಂದ ಕಚ್ಚಾತೈಲ ಖರೀದಿಸುವುದರ ವಿರುದ್ಧ ಅಮೆರಿಕ ದಂಡರೂಪದಲ್ಲಿ ಶೇ.50ರಷ್ಟು ಸುಂಕವನ್ನು ಭಾರತಕ್ಕೆ ಹೇರಿದ್ದು, ಈ ದುಬಾರಿ ಸುಂಕ ಭಾರತದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ಆತಂಕಗಳ ಮಧ್ಯೆ, ಪ್ರಧಾನಿ ನರೇಂದ್ರ ಮೋದಿಯವರು ಜಪಾನ್‌ನ ಇಕನಾಮಿಕ್ ಫಾರಮ್ ಕಾರ್ಯಕ್ರಮದಲ್ಲಿ ಭಾರತದ ಆರ್ಥಿಕತೆಯ ಬಲಿಷ್ಠತೆಯನ್ನು ಘಂಟಾಘೋಷವಾಗಿ ವಿವರಿಸಿದ್ದಾರೆ.

 

Related Articles

error: Content is protected !!