Home » ಕೆನಡಾದಿಂದ ಮೋದಿಗೆ ಜಿ7 ಶೃಂಗಸಭೆಗೆ ಆಹ್ವಾನ
 

ಕೆನಡಾದಿಂದ ಮೋದಿಗೆ ಜಿ7 ಶೃಂಗಸಭೆಗೆ ಆಹ್ವಾನ

by Kundapur Xpress
Spread the love

ಹೊಸದಿಲ್ಲಿ : ಮುಂಬರುವ ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರೊಂದಿಗೆ ದೂರವಾಣಿ ಸಂಭಾಷಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದೃಢಪಡಿಸಿದ್ದಾರೆ. ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿರುವುದರಿಂದ ಭಾರತವನ್ನು ಶೃಂಗಸಭೆಗೆ ಆಹ್ವಾನಿಸಲಾಗಿಲ್ಲ ಎಂಬ ಕಾಂಗ್ರೆಸ್‌ನ ಆರೋಪದ ಬೆನ್ನಲ್ಲೇ ಈ ಆಹ್ವಾನ ಬಂದಿದೆ.

ಹಲವಾರು ಮಾಧ್ಯಮಗಳು ಭಾರತವನ್ನು ಆಹ್ವಾನಿಸಲಾಗಿಲ್ಲ ಎಂದು ವರದಿಗಳನ್ನು ಪ್ರಕಟಿಸಿದ್ದವು. ಇದನ್ನೇ ಆಧಾರವಾಗಿಟ್ಟು ಕೊಂಡು ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ಮೇಲೆ ದಾಳಿ ಮಾಡಲು ಪ್ರಾರಂಭಿಸಿತ್ತು. ವಾಸ್ತವದಲ್ಲಿ ಕೆನಡಾ ಮಾಧ್ಯಮಗಳು ಮತ್ತು ಕಾಂಗ್ರೆಸ್ ಕೆನಡಾ ತನ್ನ ಜಿ7 ಅತಿಥಿಗಳ ಆಹ್ವಾನ ಪಟ್ಟಿಯನ್ನು ತಯಾರಿಸುವ ಮುನ್ನವೇ ಈ ಆರೋಪ ಮಾಡಿತ್ತು.

ಕೆನಡಾ ಪ್ರಧಾನಿ ಅವರಿಂದ ಕರೆ ಸ್ವೀಕರಿಸಲು ಸಂತೋಷವಾಗಿದೆ. ಇತ್ತೀಚಿನ ಚುನಾವಣಾ ವಿಜಯಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಮತ್ತು ಜೂನ್ 15 ರಿಂದ 17 ರವರೆಗೆ ಕನನಾಸ್ಥಿಸ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಆಹ್ವಾನ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ, ಎಂದು ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜನರ ನಡುವಿನ ಆಳವಾದ ಸಂಬಂಧಗಳಿಂದ ಬೆಳೆದಿರುವ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ಭಾರತ ಮತ್ತು ಕೆನಡಾ ಪರಸ್ಪರ ಗೌರವ ಮತ್ತು ಪರಸ್ಪರರ ಆಸಕ್ತಿಗಳಿಗೆ ಅನುಗುಣವಾಗಿ ಹೊಸ ಚೈತನ್ಯದೊಂದಿಗೆ ಕೆಲಸ ಮಾಡಲಿವೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

 

Related Articles

error: Content is protected !!