101
ಆಯೋಧ್ಯೆ : ಗುಜರಾತ್‌ನ ವಜ್ರ ವ್ಯಾಪಾರಿಯೊಬ್ಬರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 11 ಕಿರೀಟಗಳು ಮತ್ತು ಚಿನ್ನದ ಬಿಲ್ಲು ಮತ್ತು ಬಾಣ ಸೇರಿದಂತೆ ಕೋಟ್ಯಾಂತರ ಬೆಲೆಬಾಳುವ ಅಮೂಲ್ಯವಾದ ಆಭರಣಗಳನ್ನು ದಾನ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಹಿಂಪ) ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರಸಿದ್ಧ ಆಭರಣ ಸಂಸ್ಥೆ ಗ್ರೀನ್ ಲ್ಯಾಟ್‌ನ ಮಾಲೀಕ, ಗುಜರಾತ್ ನ ಸೂರತ್ ಮೂಲದ ಮುಖೇಶ್ ಪಟೇಲ್ ದೇವಾಲಯಕ್ಕೆ ನೀಡಿರುವ ಕೊಡುಗೆಗಳಲ್ಲಿ ವಜ್ರಗಳು, ಚಿನ್ನ, ಬೆಳ್ಳಿ ಮತ್ತು ಮಾಣಿಕ್ಯಗಳಿಂದ ಮಾಡಿದ ಅದ್ಭುತ ಆಭರಣಗಳೂ ಸೇರಿವೆ ಎಂದು ವಿಹಿಂಪ ರಾಷ್ಟ್ರೀಯ ಖಜಾಂಚಿ ದಿನೇಶ್ ನೆವಾಡಿಯಾ ಹೇಳಿದ್ದಾರೆ.
ಈ ವಸ್ತುಗಳನ್ನು ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಸಾಗಿಸಲಾಯಿತು. ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣ ಮತ್ತು ಅಲಂಕಾರವನ್ನು ನೋಡಿಕೊಳ್ಳುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶಾದ್ಯಂತ ಅನೇಕ ದೇಣಿಗೆಗಳನ್ನು ಪಡೆದಿದೆ.

