ಶ್ರೀಹರಿಕೋಟ (ಆಂಧ್ರಪ್ರದೇಶ) : ಜಿಎಸ್ ಎಲ್ವಿ ರಾಕೆಟ್ ಪೇಲೋಡ್ ಅನ್ನು ನಿಗದಿತ ಕಕ್ಷೆಗೆ ಸೇರಿಸುವ ಮೂಲಕ ಬುಧವಾರ ಇಸ್ರೋ ತನ್ನ 100ನೇ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿ ಮಹತ್ವದ ಸಾಧನೆ ಮಾಡಿದೆ.
ಇಸ್ರೋ ಅಧ್ಯಕ್ಷ ಡಾ.ವಿ. ನಾರಾಯಣನ್ ನೇತೃತ್ವದಲ್ಲಿ ಬುಧವಾರ ಬೆಳಗಿನ ಜಾವ 6.23ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎನ್ ವಿಎಸ್-02 ಯಶಸ್ವಿಯಾಗಿ ಉಡಾವಣೆಗೊಂಡಿತು. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕ್ರಯೋಜೆನಿಕ್ ಮೇಲ್ಬಾಗವನ್ನು ಹೊಂದಿರುವ 50.9 ಮೀಟರ್ ಎತ್ತರದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ) ರಾಕೆಟ್, ದಟ್ಟ ಹೊಗೆ ಹೊರಸೂಸುತ್ತಾ ಇಲ್ಲಿನ ಎರಡನೇ ಉಡಾವಣಾ ಪ್ಯಾಡ್ನಿಂದ ಭವ್ಯವಾಗಿ ಆಕಾಶಕ್ಕೆ ಚಿಮ್ಮಿತು.
ಇದರೊಂದಿಗೆ ಇಸ್ರೋ ತನ್ನ 100ನೇ ಬಾಹ್ಯಾಕಾಶ ಉಡಾವಣೆಯನ್ನು ನ್ಯಾವಿಗೇಷನ್ ಉಪಗ್ರಹವನ್ನು ಉಡಾಯಿಸುವ ಮೂಲಕ ಆಚರಿಸಿತು. ಈ ಉಪಗ್ರಹ, ಭೂಮಂಡಲದ, ವೈಮಾನಿಕ, ಕಡಲ ನ್ಯಾವಿಗೇಷನ್ ಮತ್ತು ಕೃಷಿಗೆ ಸಹಾಯ ಮಾಡುತ್ತದೆ