Home » ಜಾಫರ್‌ ರೈಲು ಹೈಜಾಕ್‌ : 50ಕ್ಕೂ ಹೆಚ್ಚು ಒತ್ತೆಯಾಳುಗಳ ಹತ್ಯೆ
 

ಜಾಫರ್‌ ರೈಲು ಹೈಜಾಕ್‌ : 50ಕ್ಕೂ ಹೆಚ್ಚು ಒತ್ತೆಯಾಳುಗಳ ಹತ್ಯೆ

by Kundapur Xpress
Spread the love

ಇಸ್ಲಾಮಾಬಾದ್ : ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಲೂಚ್ ವಿಮೋಷನಾ ಸೇನೆ (ಬಿಎಲ್‌ಎ) ನಡೆಸಿದ ಜಾಫರ್ ಎಕ್ಸ್‌ಪ್ರೆಸ್ ರೈಲು ಹೈಜಾಕ್ ಪ್ರಹಸನ ಬುಧವಾರವೂ ಮುಂದುವರಿಯಿತು.

24 ಗಂಟೆಗಳ ಒಳಗೆ ಬೇಡಿಕೆ ಈಡೇರಿಸದಿದ್ದರೇ ಒತ್ತೆಯಾಳುಗಳು ರಾಜ್ಯ ದೌರ್ಜನ್ಯ, ವಸಾಹತುಶಾಹಿ ಆಕ್ರಮಣ, ನರಮೇಧ, ಶೋಷಣೆ ಮತ್ತು ಯುದ್ಧ ಅಪರಾಧಗಳು ಸೇರಿ ಇತರ ಆರೋಪಗಳ ಮೇಲೆ ಬಲೂಚ್ ರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಮತ್ತು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಬಲೂಚಿಸ್ತಾನ ವಿಮೋಚನಾ ಸೇನೆ ಎಚ್ಚರಿಕೆ ನೀಡಿದೆ. 

ಈ ಬೆನ್ನಲ್ಲೇ ಪಾಕಿಸ್ತಾನದ ನಿರಂತರ ಆಕ್ರಮಣ, ಹಠಮಾರಿತನ ಮತ್ತು ಖೈದಿಗಳ ವಿನಿಮಯ ಮಾಡಿಕೊಳ್ಳಲು ವಿಫಲವಾದ ಹಿನ್ನೆಲೆ ನೇರ ಪ್ರತೀಕಾರವಾಗಿ, ಬಿಎಲ್ಎ ಗಡುವು ನೀಡಿದ ಒಂದು ಗಂಟೆಯೊಳಗೆ 50ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹತ್ಯೆ ಮಾಡಿದೆ. ಮೃತರು ಬಲೂಚಿಸ್ತಾನದಲ್ಲಿ ಯುದ್ಧಾಪರಾಧಗಳು, ಬಲವಂತದ ಅಪಹರಣ, ಮೂಲಸೌಲಭ್ಯ ಒದಗಿಸದೆ ಶೋಷಣೆ ಮತ್ತು ಭಯೋತ್ಪಾದನೆ ಕೃತ್ಯಗಳಲ್ಲಿ ತಪ್ಪಿತಸ್ಥರು ಎಂದು ಬಲೂಚ್ ರಾಷ್ಟ್ರೀಯ ನ್ಯಾಯಾಲಯವು ತೀರ್ಪು ನೀಡಿದೆ. ಒಂಬತ್ತು ಬೋಗಿಗಳಲ್ಲಿ ಸುಮಾರು 400 ಪ್ರಯಾಣಿಕರು ಸಂಚರಿಸುತ್ತಿದ್ದ ಜಾಫರ್ ಎಕ್ಸ್ ಪ್ರೆಸ್ ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿದ್ದಾಗ ಉಗ್ರರು ಸ್ಫೋಟಕಗಳನ್ನು ಬಳಸಿ ರೈಲನ್ನು ಹೈಜಾಕ್ ಮಾಡಿದ್ದರು.

ಅಪಹರಣಕ್ಕೊಳಗಾದ ರೈಲಿನಿಂದ 190 ಪ್ರಯಾಣಿಕರನ್ನು ಭದ್ರತಾ ಪಡೆಗಳು ರಕ್ಷಿಸಿದ್ದು, ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನದಲ್ಲಿ 30 ಬಲೂಚ್ ವಿಮೋಚನಾ ಸೇನೆ ಸಿಬ್ಬಂದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದಾಗ್ಯೂ, ಸಾವುನೋವುಗಳ ಬಗ್ಗೆ ಪಾಕಿಸ್ತಾನದ ಅಧಿಕಾರಿಗಳಿಂದ ಯಾವುದೇ ದೃಢೀಕರಣವಿಲ್ಲ.

ಸ್ಫೋಟಕಗಳನ್ನು ತುಂಬಿದ ಉಡುಪನ್ನು ಧರಿಸಿದ ಕೆಲವು ಉಗ್ರರು ಮಹಿಳೆಯರು ಮತ್ತು ಮಕ್ಕಳ ಗುಂಪುಗಳನ್ನು ರಚಿಸಿ ಅವರ ಬಳಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತ್ಮಾಹುತಿ ಬಾಂಬರ್ ಗಳೊಂದಿಗೆ ಮಹಿಳೆಯರು ಮತ್ತು ಮಕ್ಕಳ ಉಪಸ್ಥಿತಿಯಿಂದಾಗಿ, ಕಾರ್ಯಾಚರಣೆಯನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

 

 

Related Articles

error: Content is protected !!